ಮಲೇಬೆನ್ನೂರಿನಲ್ಲಿ ನೃತ್ಯ, ಜಾದೂ ಪ್ರದರ್ಶನ

ಮಲೇಬೆನ್ನೂರಿನಲ್ಲಿ  ನೃತ್ಯ, ಜಾದೂ ಪ್ರದರ್ಶನ

ಮಲೇಬೆನ್ನೂರು, ಸೆ.18- ಇಲ್ಲಿನ ನೀರಾವರಿ ಇಲಾಖೆಯ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ 3ನೇ ವರ್ಷದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಪಿಡಬ್ಲ್ಯೂಡಿ ಕ್ರಿಕೆಟರ್ಸ್ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜಾದೂ ಪ್ರದರ್ಶನ ಎಲ್ಲರ ಗಮನ ಸೆಳೆದವು.

ಮಧ್ಯಾಹ್ನ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಹಾಕಿದ್ದ ಬಣ್ಣ ಬಣ್ಣದ ರಂಗೋಲಿ ಆಕರ್ಷಣೀಯವಾಗಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಟಾಣಿಗಳ ನೃತ್ಯ, ಶಾಲಾ ಮಕ್ಕಳ ಸಾಮೂಹಿಕ ನೃತ್ಯಗಳು ಹಾಗೂ ಬಾಲನಟ, ಡ್ಯಾನ್ಸಿಂಗ್ ಐಕಾನ್ ಸೂರಜ್ ಎನ್.ಚಿಟ್ಟಕ್ಕಿ ಮತ್ತು ತಂಡದವರ ನೃತ್ಯಗಳು ಎಲ್ಲರ ಮನಸೂರೆಗೊಂಡವು.

ಜಾದೂಗಾರ ಬಳ್ಳಾರಿಯ ಸಂದೀಪ್ ಅವರು ನಡೆಸಿಕೊಟ್ಟ ಜಾದೂ ಪ್ರದರ್ಶನದಲ್ಲಿ ಸಭಿಕರು ಕಳೆದು ಹೋಗಿದ್ದರು.

error: Content is protected !!