ಹರಪನಹಳ್ಳಿ, ಸೆ.12- ತಾಲ್ಲೂಕಿನ ನಂದಿಬೇವೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಪಾರ್ವತಮ್ಮ ಆಯ್ಕೆಯಾಗಿದ್ದಾರೆ.
ಕೊಂಗನ ಹೊಸೂರು ರತ್ನಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಎಸ್ಸಿ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಂದಿ ಬೇವೂರಿನ ಪಾರ್ವತಮ್ಮ ಮತ್ತು ಸುಜಾತ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 23 ಸದಸ್ಯರನ್ನು ಹೊಂದಿರುವ ಗ್ರಾ.ಪಂಚಾಯತಿಯಲ್ಲಿ ಪಾರ್ವತಮ್ಮ 14 ಮತಗಳನ್ನು ಪಡೆದು ಜಯಶೀಲರಾದರೆ ಪ್ರತಿ ಸ್ಪರ್ಧಿ ಸುಜಾತ 9 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಬಿ.ವಿ. ಗಿರೀಶ್ಬಾಬು ತಿಳಿಸಿದರು.
ಈ ವೇಳೆ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಸದಸ್ಯರಾದ ಕಲ್ಲಹಳ್ಳಿ ಬೃಂದಮ್ಮ, ನಾಗಮ್ಮ, ಆವಿನ ಸುಜಾತ, ಸಿದ್ದೇಶ, ಫಕ್ಕಿರಪ್ಪ, ವೀರಣ್ಣ, ಭರಮನಗೌಡ, ರತ್ನಮ್ಮ, ಭೀಮಣ್ಣ, ವೀರಮ್ಮ, ಪಿಡಿಒ ಎಸ್. ವೀರೇಶ್, ಗ್ರಾಮ ಆಡಳಿತಾಧಿಕಾರಿ ಸುರೇಶ್ ಮತ್ತಿತರರಿದ್ದರು.