ಏಳನೇ ವೇತನ ಜಾರಿಗೊಳಿಸಲು ನಿವೃತ್ತ ನೌಕರರ ಸಂಘದ ಒತ್ತಾಯ

ಏಳನೇ ವೇತನ ಜಾರಿಗೊಳಿಸಲು ನಿವೃತ್ತ ನೌಕರರ ಸಂಘದ ಒತ್ತಾಯ

ಹರಪನಹಳ್ಳಿ, ಸೆ. 12 – ಏಳನೇ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ನಿವೃತ್ತ ನೌಕರರ ಭಾದಿತ ನೌಕರರ ಸಂಘದ ವತಿಯಿಂದ ಮನವಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಇವೇಳೆ ಸರ್ಕಾರಿ ನಿವೃತ್ತ ನೌಕರರ ಬಾಧಿತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶೇಖರಗೌಡ ಪಾಟೀಲ ಮಾತನಾಡಿ ರಾಜ್ಯಸರ್ಕಾರ ಏಳನೇ ವೇತನ ಆಯೋಗದ ವರದಿಯ ಶಿಫಾರಸುಗಳನ್ನು ಅನುಷ್ಠಾನ ಆದೇಶದಲ್ಲಿ  ದಿನಾಂಕ 1.7.22ರಿಂದ 1.7.24 ರ, ಮದ್ಯದ ಅವಧಿಯಲ್ಲಿ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯ ನೀಡುವಲ್ಲಿ ತಾರತಮ್ಯವಾಗಿದ್ದನ್ನು  ಸರ್ಕಾರ ಮನಗಂಡು  ಈ ಕೂಡಲೇ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ನಿವೃತ್ತ ನೌಕರರ ಭಾಧಿತ ನೌಕರರ ಜಿಲ್ಲಾ ಸಂಚಾಲಕ ಸಿದ್ಲಿಂಗಗೌಡ ಮಾತನಾಡಿ ನಮಗೆ ಅನುಷ್ಟಾನ ಗೊಳಿಸಿದ 7ನೇ ಆಯೋಗದ ವರದಿಯಲ್ಲಿ  1-7-22ರಿಂದ1-7-24 ದೊಳಗಿನ ಅವದಿ ಒಟ್ಟು 25 ತಿಂಗಳಲ್ಲಿ  ತಾರತಮ್ಯ ವನ್ನು  ಸರ್ಕಾರ ಪರಿಶೀಲಿಸಿ  ತಾರತಮ್ಯ ಸರಿಪಡಿಸಕೊ ಡಬೇಕೆಂದು, ಮೊದಲನೆಯ ಹೆಜ್ಜೆಯಾಗಿ  ಮನವಿ ಅರ್ಪಿಸಲಾಗಿದೆ. ಮುಂದಿನ ದಿನಮಾನದಲ್ಲಿ ಉಗ್ರವಾದ  ಹೋರಾಟಕ್ಕೆ ಬಾಧಿತ ನಿವೃತ್ತ ನೌಕರರು  ಇಳಿಯಬೇಕಾಗುತ್ತದೆಂದು  ಸರ್ಕಾರಕ್ಕೆ ಎಚ್ಚರಿಸಿದರು.

ಇವೇಳೆ ಬಾಧಿತ ನೌಕರರ ಮುಖ್ಯ ಸಂಚಾಲಕರಾದ ಶಿವಾನಂದಪ್ಪ ಕೌಟಿ,ತಾಲೂಕು ಸಂಚಾಲಕ ರಾದ ಮೂರ್ತಿ ನಾಯ್ಕ, ದೇವಿಂದ್ರಗೌಡ, ತಿಪ್ಪೇರುದ್ರಪ್ಪ,ಐ ಕೊಟ್ರಪ್ಪ, ನಿವ್ರತ್ತ ನೌಕರರ ಸಂಘದ ಕಾರ್ಯದರ್ಶಿ ಕೆ .ಕೊಟ್ರಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಶೇಖರಪ್ಪ ಬಾಧಿತ ಮಹಿಳಾ ನೌಕರರು ಹಾಗೂ ಮುಂತಾದವರಿದ್ದರು.

error: Content is protected !!