ದಾವಣಗೆರೆ, ಸೆ.11- ಸ್ಥಳೀಯ ಭಗತ್ ಸಿಂಗ್ ನಗರದ ಆಟೋ ನಿಲ್ದಾಣದ ಬಳಿ ಗುರುದ್ರೋಣ ಕ್ರೀಡಾ ಸಮಿತಿ ಹಾಗೂ ವಿನಾಯಕ ಗೆಳೆಯರ ಬಳಗದಿಂದ 11ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಲ್ಲಿನ ಮಂಟಪ ವಿಶೇಷತೆ ಹೊಂದಿದೆ. ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಹೆಸರಾಂತ ಕ್ರೀಡಾಪಟುಗಳು, ಕಾರ್ಗಿಲ್ ವೀರ ಯೋಧರು, ರಾಷ್ಟ್ರಕವಿಗಳು, ಚಲನಚಿತ್ರ ಕಲಾವಿದರು, ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಮೊದಲಾದ ಫ್ಲೆಕ್ಸ್‌ಗಳು ಇಲ್ಲಿವೆ.
January 2, 2025