ಹರಪನಹಳ್ಳಿ : ಬಿ.ಜೆ.ಪಿ. ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಲಕ್ಷ್ಮಣ್
ಹರಪನಹಳ್ಳಿ, ಸೆ. 4- ವಿಶ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜಕೀಯ ಪಕ್ಷವಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ಹೇಳಿದರು.
ಪಟ್ಟಣದ ಐಬಿ ವೃತ್ತದಲ್ಲಿ ಬಿ.ಜೆ.ಪಿ. ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ಮೊದಲು ಎಂಬ ಚಿಂತನೆಯೊಂದಿಗೆ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಬೆಸೆಯುವ ಸದಸ್ಯತ್ವ ಅಭಿಯಾನ ಇದಾಗಿದೆ. ಪ್ರತಿಯೊಂದು ಮನೆ, ಪ್ರತಿಯೊಬ್ಬ ವ್ಯಕ್ತಿಯೂ ಸದಸ್ಯನಾಗು ವುದನ್ನು ಕಾರ್ಯಕರ್ತರು ಖಾತರಿಪಡಿಸಿಕೊಳ್ಳ ಬೇಕು. ಹಿಂದೆ ನಡೆದ ನೋಂದಣಿ ಅಭಿಯಾನಕ್ಕಿಂತಲೂ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸುವ ಜವಾಬ್ದಾರಿ ಹೊತ್ತವರು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಮತ್ತೊಂದು ಸುತ್ತಿನ ಸದಸ್ಯತ್ವ ಅಭಿಯಾನ ಆರಂಭ ವಾಗುತ್ತಿದೆ. ಜನರು ಅಧಿಕಾರ ನೀಡುವ ಸಂಘಟನೆ ಅಥವಾ ರಾಜಕೀಯ ಪಕ್ಷವು ಪ್ರಜಾ ಸತ್ತಾತ್ಮಕ ಮೌಲ್ಯಗಳನ್ನು ಅನುಸರಿಸದಿದ್ದರೆ, ಆಂತರಿಕ ಪ್ರಜಾಪ್ರಭುತ್ವ ಕಾಪಾಡಿಕೊಳ್ಳದಿದ್ದರೆ ಇಂದು ಹಲವಾರು ರಾಜಕೀಯ ಪಕ್ಷಗಳು ಎದುರಿಸುತ್ತಿರುವ ಪರಿಸ್ಥಿತಿ ಎಲ್ಲರಿಗೂ ಬರಲಿದೆ ಎಂದರು.
ಜಿಲ್ಲಾ ಸಹ ಸಂಚಾಲಕ ಕಡ್ಲಿ ರಾಘವೇಂದ್ರ ಶೆಟ್ಟಿ ಮಾತನಾಡಿ, ಕೆಲ ರಾಜಕಾರಣಿಗಳು ಅಧಿಕಾರದ ಅಂಚಿಗೂ ಬರಲಾಗದವರು ಚಿತ್ರ ಬರೆಯುತ್ತಾರೆ ಎಂದು ಟೀಕಿಸಿದ್ದರು. ನಾವು ಜನರ ಹೃದಯದಲ್ಲಿ ಕಮಲದ ಚಿತ್ರ ಬರೆದಿದ್ದೇವೆ. ಇದು ಬರೀ ಸದಸ್ಯತ್ವ ಅಭಿಯಾನದ ಸಂಪ್ರದಾಯವಲ್ಲ, ನಮ್ಮ ಕುಟುಂಬದ ವಿಸ್ತರಣೆ ಎಂದರು.
ಬಿಜೆಪಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ್ ಮಾತನಾಡಿ, ಪರಿಣಾಮಕಾರಿಯಾಗಿರುವ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಪರಿಕಲ್ಪನೆಗೆ ಹೆಚ್ಚು ಮಹತ್ವ ದೊರೆತಿರುವ ಕಾರಣಕ್ಕೆ ಕಾಂಗ್ರೆಸ್‌ನವರು ಬಿಜೆಪಿ ಮಾದರಿಯನ್ನು ನಕಲು ಮಾಡುತ್ತಿರುವುದೇ ಸಾಕ್ಷಿಯಾಗಿದೆ.
ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ್, ಬಿಜೆಪಿ ಸದಸ್ಯತ್ವ ಅಭಿಯಾನದ ಮಂಡಲ ಸಂಚಾಲಕ ಮುದುಕವ್ವನವರ ಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ಎ. ಉದಯಕುಮಾರ್, ಬಿ.ವೈ. ವೆಂಕಟೇಶ್ ನಾಯಕ್, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಲಿಂಬ್ಯಾನಾಯ್ಕ, ಜೆ. ಓಂಕಾರ್ ಗೌಡ, ಕುಸುಮ ಜಗದೀಶ್, ತೆಲಿಗಿ ಗಂಗಾಧರ, ಬಾಗಳಿ ಜಗದೀಶ್, ಬಂಡ್ರಿ ರಾಜು, ರೇಖಮ್ಮ, ಬೂದಿ ನವೀನ, ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರ ಸಮ್ಮುಖ ದಲ್ಲಿ ಪಕ್ಷದ ಹಿತೈಷಿಗಳಿಗೆ ಹಾಗೂ ಅಭಿಮಾನಿ ಗಳಿಗೆ ಮಿಸ್ಡ್ ಕಾಲ್ ಕೊಡುವುದರ ಮೂಲಕ ಸದಸ್ಯತ ಅಭಿಯಾನವನ್ನು ಮಾಡಲಾಯಿತು.