ಹರಿಹರ, ಸೆ, 3-ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಡೆಯುವ ನಿತ್ಯ ಅನ್ನ ದಾಸೋಹಕ್ಕೆ ಹೊನ್ನಾಳಿ ಪಂಚಮಸಾಲಿ ಸಮಾಜದವರು 2 ಲಕ್ಷದ 25 ಸಾವಿರ ರೂ. ದೇಣಿಗೆಯ ಚೆಕ್ಕನ್ನು ದಾಸೋಹ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಾಟೀಲ್, ಧರ್ಮದರ್ಶಿ ಬಿ.ಸಿ. ಉಮಾಪತಿ, ರಾಜ್ಯ ಪಂಚಮಸಾಲಿ ಸಮಾಜದ ನೂತನ ಅಧ್ಯಕ್ಷ ಸೋಮನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಪಟ್ಟಣ್ಣಶೆಟ್ಟಿ ಅವರುಗಳು ಆಡಳಿತಾಧಿಕಾರಿ ಡಾ. ರಾಜಕುಮಾರ್ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಪಿ.ಡಿ. ಶಿರೂರು, ಹೊನ್ನಾಳಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಹೆಚ್.ಪಿ. ವೀರಣ್ಣ, ಮಾಜಿ ಅಧ್ಯಕ್ಷ ಸೋಮಣ್ಣ ಕುಂಕೋದ್, ಅಶೋಕ, ಮೋಹನ್ ಇತರರು ಹಾಜರಿದ್ದರು.