ಹಾವೇರಿ ಜಿಲ್ಲೆಗೆ 34 ಖಬರಸ್ತಾನಗಳ ಅವಶ್ಯವಿದೆ

ಹಾವೇರಿ ಜಿಲ್ಲೆಗೆ  34 ಖಬರಸ್ತಾನಗಳ ಅವಶ್ಯವಿದೆ

ವಕ್ಫ ಜಿಲ್ಲಾಧ್ಯಕ್ಷ ನಾಸಿರ್ ಖಾನ್ ಪಠಾಣ್

ರಾಣೇಬೆನ್ನೂರು, ಸೆ.3- ಸಮಾಜದ ಒಳಿತಿಗೆ ಕೆಲ ಮುಸ್ಲಿಂ ಸಮಾಜದ ಮುಖಂಡರು ದಾನವಾಗಿ ನೀಡಿದ್ದ ಆಸ್ತಿಗಳು ವಕ್ಫ್ ಆಸ್ತಿಗಳಾಗಿವೆ. ಅವುಗಳನ್ನು ಕೆಲವರು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಈ ಆಸ್ತಿ ರಕ್ಷಣೆಗೆ ನಿಷ್ಕ್ರಿಯಗೊಂಡಿರುವ ಟಾಸ್ಕ್ ಪೋರ್ಸ್‌ಗಳನ್ನು ಬಲಗೊಳಿಸುವ ಹಾಗೂ ಸಮಾಜ ಜನರ ಅಂತಿಮ ವಿದಿವಿಧಾನಗಳಿಗೆ ಹಾವೇರಿ ಜಿಲ್ಲೆಯ 34 ಕಡೆಗಳಲ್ಲಿ ಅವಶ್ಯವಿರುವ ಖಬರಸ್ತಾನಗಳ ಕುರಿತು ನಾಳೆ ದಿನಾಂಕ 3 ರಂದು ಹಾವೇರಿ ನಗರದಲ್ಲಿ ನಡೆಯುವ ವಕ್ಫ್ ಅದಾಲತ್‌ನಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಸಲಹಾ ಸಮಿತಿ ಅದ್ಯಕ್ಷ ನಾಸೀರ್ ಖಾನ್ ಪಠಾಣ್ ತಿಳಿಸಿದ್ದಾರೆ.

ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ದಿನಾಂಕ 3 ರಂದು  ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ಅದ್ಯಕ್ಷತೆಯಲ್ಲಿ ನಡೆಯುವ ಹಾವೇರಿ ಹಾಗೂ ಗದಗ ಜಿಲ್ಲೆಯ ಅದಾಲತ್ ಇದಾಗಿದ್ದು, ಹಾವೇರಿ ಜಿಲ್ಲೆಯೊಂದರಲ್ಲಿರುವ 5.633 ಎಕರೆ ಆಸ್ತಿಯಲ್ಲಿ 900 ಎಕರೆಯಷ್ಟು ಅತಿಕ್ರಮಣವಾಗಿದ್ದು ಈ ಕುರಿತು ಜೊತೆಗೆ, ಜಿಲ್ಲೆಯಲ್ಲಿರುವ 687 ಸಂಘಟನೆಯವರು ತಮ್ಮ ಗ್ರಾಮಗಳಲ್ಲಿರುವ ವ್ಯಾಜ್ಯಗಳ ಮಾಹಿತಿ ಸಲ್ಲಿಸಿದರೆ, ಅವುಗಳ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಈ ಮೊದಲು ಬೀದರ್‌ನಲ್ಲಿ ನಡೆದ ಅದಾಲತ್‌ನಲ್ಲಿ 387 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 290 ಅರ್ಜಿಗಳ ಬಗ್ಗೆ ಸ್ಥಳದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಯಿತು. ನಂತರ ನಡೆದ ಹುಬ್ಬಳ್ಳಿಯಲ್ಲಿನ ಅದಾಲತ್‌ನಲ್ಲೂ ಸಹ ಅರ್ಜಿಗಳ ವಿಲೇವಾರಿ ನಡೆಯಿತು. ಈಗ ಮೂರನೇಯ ಅದಾಲತ್ ಹಾವೇರಿಯಲ್ಲಿ ನಡೆಯಲಿದೆ. ಇಲ್ಲೂ ಸಹ ಸೂಕ್ತ ನಿರ್ಣಯಗಳಾಗಲಿವೆ ಎಂದು ಪಠಾಣ್ ಹೇಳಿದ್ದಾರೆ.

error: Content is protected !!