ಅಂತರಾಷ್ಟ್ರೀಯ ಖ್ಯಾತಿಯ ಸಾಂಸ್ಕೃತಿಕ ಸಂಸ್ಥೆ ಸ್ಪಿಕ್ ಮ್ಯಾಕೆ ದಾವಣಗೆರೆ ಆವೃತ್ತಿಯ, ವಿಭಾಗದ ವತಿಯಿಂದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಬಿಸ್ಮಿಲ್ಲಾಖಾನ್ ಯುವ ಪ್ರಶಸ್ತಿ ಪುರಸ್ಕೃತ ಮೈಸೂರಿನ ಪ್ರಖ್ಯಾತ ಕೊಳಲು ವಾದಕ ಎ. ಚಂದನ್ ಕುಮಾರ್ ಅವರಿಂದ ಇಂದು ಮೂರು ಕಡೆಗಳಲ್ಲಿ ಸಂಗೀತ ಗೋಷ್ಠಿ ಏರ್ಪಡಿಸಲಾಗಿದೆ.
ಮೃದಂಗ ಹಾಗೂ ಘಟ ವಾದಕ ರಾಮಾನುಜನ್ ಜಿ.ಎಸ್. ಮತ್ತು ಪ್ರಸಿದ್ಧ ವಾದಕ ಮೋರ್ಸಿಂಗ್ ಟಿ.ಎ. ರಾಮನುಜನ್ ಅವರು ಸಾಥ್ ನೀಡಲಿದ್ದಾರೆಂದು ಸಾಂಸ್ಕೃತಿಕ ಸಂಸ್ಥೆ, ಸ್ಪಿಕ್ ಮೇಕೆಯ ದಾವಣಗೆರೆ ಆವೃತ್ತಿ ವಿಭಾಗದ ಅಧ್ಯಕ್ಷ ಮಂಜುನಾಥ್ ರಂಗರಾಜ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಬಿಹೆಚ್ಪಿಎಸ್ ಶಾಲೆ ಎಂಸಿಸಿ `ಬಿ’ ಬ್ಲಾಕ್, ಮಧ್ಯಾಹ್ನ 12 ಗಂಟೆಗೆ ಡಾ.ಎಸ್ಎಸ್ಎನ್ಪಿ ಶಾಲೆ ಮತ್ತು 3 ಗಂಟೆಗೆ ಪಿಎಸ್ಎಸ್ಆರ್ ಶಾಲೆ (ತೋಳಹುಣಸೆ) ಇಲ್ಲಿ ಸಂಗೀತ ಗೋಷ್ಠಿಗಳು ಆಯೋಜನೆಗೊಂಡಿವೆ.