ಪ್ರಧಾನಿ ರೋಡ್ ಶೋ ವೇಳೆ ಭದ್ರತಾ ಲೋಪ

ಪ್ರಧಾನಿ ರೋಡ್ ಶೋ ವೇಳೆ ಭದ್ರತಾ ಲೋಪ

ಹುಬ್ಬಳ್ಳಿ, ಜ. 12 – ಯುವಜನೋತ್ಸವದ ಉದ್ಘಾಟನೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೋಡ್ ಶೋ ನಡೆಸುವಾಗ ಭದ್ರತಾ ಲೋಪವಾಗಿದೆ.

ಪ್ರಧಾನಿ ಮೋದಿ ಅವರು, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ಸುಮಾರು ಒಂದು ಗಂಟೆಗಳ ಕಾಲ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ಯುವಕನೋರ್ವ ಗೇಟ್ ಹಾರಿ ಪ್ರಧಾನ ಮಂತ್ರಿಗೆ ಹಾರ ಹಾಕಲು ಧಾವಿಸಿದ್ದ. ಪ್ರಧಾನಿ ತೀರಾ ಸಮೀಪಕ್ಕೆ ಬಂದಿದ್ದ ಯುವಕನನ್ನು ಭದ್ರತಾ ಸಿಬ್ಬಂದಿ ಎಳೆದೊಯ್ದಿದ್ದಾರೆ.

ಪ್ರಧಾನಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜನರು ರಸ್ತೆಯ ಇಕ್ಕೆಲಗಳಲ್ಲಿ ನೆರೆದು ಪುಷ್ಪ ವೃಷ್ಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಕಾರಿನ ಬಾಗಿಲು ತೆರೆದು ಜನರ ಕಡೆ ಕೈ ಬೀಸುತ್ತಿದ್ದರು.

ಈ ಬಗ್ಗೆ ಹೇಳಿಕೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತ, ಇದನ್ನು ಭದ್ರತಾ ವೈಫಲ್ಯ ಎಂದು ಪರಿಗಣಿಸಲಾಗದು. ರಸ್ತೆಯ ಎರಡೂ ಬದಿಗೆ ಜನರನ್ನು ಸಮಗ್ರ ಪರಿಶೀಲನೆ ನಡೆಸಿದ್ದೇವೆ ಎಂದರು.

ಹಾರ ಹಾಕಲು ಬಂದಿದ್ದ ಯುವಕ  ಹುಬ್ಬಳ್ಳಿಯವನು ಎಂದು ತಿಳಿದು  ಬಂದಿದೆ. ಆತ ತಂದಿದ್ದ ಹೂವನ್ನೂ ಪರಿಶೀಲಿಸಲಾಗಿತ್ತು. ಆದರೂ, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.

error: Content is protected !!