ಸ್ವಕುಳಸಾಳಿ ಸಮಾಜ ಸಂಘಟನೆಗೆ ಒತ್ತು ನೀಡಬೇಕು

ಸ್ವಕುಳಸಾಳಿ ಸಮಾಜ ಸಂಘಟನೆಗೆ ಒತ್ತು ನೀಡಬೇಕು

ಸ್ವಕುಳಸಾಳಿ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಜಿ.ಪಿ. ಮೋಹನ್

ದಾವಣಗೆರೆ, ಆ. 11-  ಹಿಂದುಳಿದ ಸಮಾಜಗಳಲ್ಲೊಂದಾದ ಸ್ವಕುಳಸಾಳಿ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಮಾಜ ಬಾಂಧವರು ಸಂಘಟನೆಗೆ ಒತ್ತು ನೀಡಲು ಶ್ರಮಿಸಬೇಕು ಎಂದು ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಜಿ.ಪಿ. ಮೋಹನ್ ಕಿವಿಮಾತು ಹೇಳಿದರು.

ಸ್ಥಳೀಯ ಶ್ರೀ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ಕಳೆದ ವಾರ ಏರ್ಪಾಡಾಗಿದ್ದ  ಸ್ವಕುಳಸಾಳಿ ಸಮಾಜದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಬಾಂಧವರು ಸಂಘಟನೆಗೆ ಆದ್ಯತೆ ನೀಡುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹ ನೀಡಬೇಕು. ಮಕ್ಕಳನ್ನು ಕೇವಲ ಪದವಿಗಳಿಗೆ ಸೀಮಿತಗೊಳಿಸದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹುರಿದುಂಬಿಸಬೇಕು. ಆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮುದಾಯ ಭವನ : ನಗರದ ಶಿವ ಪಾರ್ವತಿ ಬಡಾವಣೆಯಲ್ಲಿರುವ ಸ್ವಕುಳ ಸಾಳಿ ಸಮಾಜದ ನಿವೇಶನದಲ್ಲಿ ಸಮಾಜಕ್ಕೆ ಅಗತ್ಯವಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ತನು-ಮನ-ಧನ ಸಹಕಾರ ನೀಡುವಂತೆ ಸಮಾಜ ಬಾಂಧವರನ್ನು ಕೇಳಿಕೊಂಡರು.

ಶ್ರೀ ಜಿಹ್ವೇಶ್ವರ ಜಯಂತಿ :  ಸಮಾಜದ ಪ್ರಧಾನ ಕಾರ್ಯದರ್ಶಿ ಧರ್ಮರಾಜ ಏಕಬೋಟೆ ಮಾತನಾಡಿ,  ಮುಂದಿನ ವಾರ ನಡೆಯಲಿರುವ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಭಗವಾನ್ ಜಿಹ್ವೇಶ್ವರ ಸ್ವಾಮಿ ಜಯಂತ್ಯೋತ್ಸವವನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಸಮಾಜಕ್ಕೆ ಸಹಕಾರ ನೀಡುತ್ತಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಸೇರಿದಂತೆ, ಅನೇಕ ಗಣ್ಯರನ್ನು ಕಳೆದ ಬಾರಿಯ ಶ್ರೀ ಜಿಹ್ವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಗೌರವಿಸಿದ್ದನ್ನು ಧರ್ಮರಾಜ್ ಏಕಬೋಟೆ ಮೆಲುಕು ಹಾಕಿದರು.

ಗೌರವಾರ್ಪಣೆ : ಶ್ರೀ ಜಿಹ್ವೇಶ್ವರ ಜಯಂತಿ ಸೇರಿದಂತೆ, ಸಮಾಜದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ-ಸಹಕಾರ-ಮಾರ್ಗದರ್ಶನ ನೀಡುತ್ತಿರುವ ಸಮಾಜದ ಹಿರಿಯರು ಮತ್ತು ದಾನಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಶ್ರೀ ಗುರುಕುಲ  ಕ್ಷೇತ್ರ ಮನಿಮಠದ ಶ್ರೀ ಗಜದಂಡ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಸ್ವಕುಳಸಾಳಿ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಹನುಮಂತಪ್ಪ ಕ್ಷೀರಸಾಗರ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದು, ಹಿತನುಡಿಗಳನ್ನಾಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ,  ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರುಗಳಾದ ಗಣೇಶ್ ಕ್ಷೀರಸಾಗರ ಮತ್ತು ಆನಂದ ಸಫಾರೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸ್ವಕುಳಸಾಳಿ ಸಮಾಜದ ಉಪಾಧ್ಯಕ್ಷ ಸುರೇಂದ್ರ ವಾಂಜ್ರೆ, ಸಹ ಕಾರ್ಯದರ್ಶಿ ವಾಸುದೇವ ಸಾಕ್ರೆ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಎನ್. ಕಾಂಬ್ಳೆ, ಸಲಹೆಗಾರ ಮಂಜುನಾಥ ವಾಂಜ್ರೆ, ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸುಜಾತ ರೋಖಡೆ, ಕಾರ್ಯದರ್ಶಿ ಶ್ರೀಮತಿ ಜಯಲಕ್ಷ್ಮಿ ಢಗೆ ಇನ್ನಿತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!