ಕೆ. ಚಿದಾನಂದಪ್ಪ ಅವರಿಗೆ `ಧರ್ಮ ರತ್ನಾಕರ’ ಬಿರುದು ಪ್ರದಾನ
ಶ್ರೀ ಅಭಿನವ ರೇಣುಕ ಮಂದಿರದಲ್ಲಿ ನಡೆಯುತ್ತಿರುವ ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 26ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಕಾರ್ಯಕ್ರಮದ ಇಂದಿನ ಸಮಾರಂಭದ ವಿವರ.
ಸಂಜೆ 6.30ಕ್ಕೆ ಏರ್ಪಾಡಾಗಿ ರುವ ಧರ್ಮೋತ್ತೇಜಕ ಸಮಾರಂಭದ ನೇತೃತ್ವ ವನ್ನು ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು, (ಎಡೆಯೂರು ಕ್ಷೇತ್ರ, ಉಪಾಧ್ಯಕ್ಷರು- ಅ.ಭಾ.ವೀ.ಶಿ. ಸಂಸ್ಥೆ ಬೆಂಗಳೂರು) ವಹಿಸುವರು. ಖಾಸಾ ಶಾಖಾ ಸಂಸ್ಥಾನ (ಮಳಲಿಮಠ)ದ ಶ್ರೀ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ಇದೇ ಸಂದರ್ಭದಲ್ಲಿ ಮಲೇಬೆನ್ನೂರಿನ ಕೈಗಾರಿಕೋದ್ಯಮಿ ಬಿ. ಚಿದಾನಂದಪ್ಪ ಅವರಿಗೆ `ಧರ್ಮ ರತ್ನಾಕರ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಲೋಕಸಭಾ ಮಾಜಿ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.