ಜಗಳೂರು, ಜು. 29 – ಭಾರತ ಸೇವಾದಳ (ದಾವಣಗೆರೆ ಜಿಲ್ಲೆ), ಭಾರತ ಸೇವಾದಳ ತಾಲ್ಲೂಕು ಸಮಿತಿ ಜಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಜಗಳೂರು ಇವರ ನೇತೃತ್ವದಲ್ಲಿ ತಾಲ್ಲೂಕಿನ ದೈಹಿಕ ಶಿಕ್ಷಕರ ಮಿಲಾಪ ಶಿಬಿರ ಮತ್ತು ಪುನಶ್ಚೇತನ ಶಿಬಿರವನ್ನು ಇಲ್ಲಿನ ಗುರು ಭವನದಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ಅಧ್ಯಕ್ಷ ಪ್ರೊ. ಚನ್ನಪ್ಪ ಪಲ್ಲಾಗಟ್ಪೆ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ಮಾಡಿದ ತಾಲ್ಲೂಕು ಸೇವಾದಳದ ಅಧ್ಯಕ್ಷ ರಾಜು ಎನ್.ಎಸ್. ಮುಖ್ಯ ಅತಿಥಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ, ಸೇವಾದಳದ ತಾಲ್ಲೂಕು ಶಾಖಾ ನಾಯಕ ಎ. ಪ್ರಸನ್ನಕುಮಾರ್, ಬಿ.ಎಂ. ವಿಜಯಲಕ್ಷ್ಮಿ ಮತ್ತು ತಾಲ್ಲೂಕಿನ ಸೇವಾದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.
January 15, 2025