ಮಲೇಬೆನ್ನೂರು, ಜು.19- ಪಟ್ಟಣದ ಹರಳಹಳ್ಳಿ ರಸ್ತೆಯಲ್ಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರ ಊರ ಹೊರಗಿನ ದೇವಸ್ಥಾನದಲ್ಲಿ ಆಷಾಢ ಮಾಸದ ಅಂಗವಾಗಿ ಶುಕ್ರವಾರ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆಯೊಂದಿಗೆ ಪರವು ಆಚರಿಸಲಾಯಿತು.
ಸಮೃದ್ಧಿ ಮಳೆ ಬೆಳೆಗಾಗಿ ಮತ್ತು ರೈತರ, ಸಾರ್ವಜನಿಕರ ಕಲ್ಯಾಣಕ್ಕಾಗಿ ಪ್ರಾರ್ಥಿಸಿ, ಬೆಳಗ್ಗೆ ಅಮ್ಮನವರಿಗೆ ಅಭಿಷೇಕದೊಂದಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಶ್ರೀ ಕೋಡಿಮರೇಶ್ವರಿ, ಹಟ್ಟಿದುರ್ಗಮ್ಮ ದೇವತೆಗಳನ್ನು ಪಟ್ಟಣದ ರಾಜ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಗಂಗೆ ಪೂಜೆ ಸಲ್ಲಿಸಿ, ಜೋಗಮ್ಮಗಳಿಗೆ ಉಡಿ ತುಂಬಿಸಿ ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು.