ಮಲೇಬೆನ್ನೂರು, ಜು.19- ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲೇಬೆನ್ನೂರು ಹೋಬಳಿಯಲ್ಲಿ 6 ಮನೆಗಳಿಗೆ ಭಾಗಶಃ ಹಾನಿ ಆಗಿದೆ ಎಂದು ಉಪ ತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.
ಪಟ್ಟಣದ 18ನೇ ವಾರ್ಡ್‌ನಲ್ಲಿ ಮೆಹಬೂಬಿ ಭಕ್ಷಿಸಾಬ್ ಅವರ ವಾಸದ ಮನೆ ಶುಕ್ರವಾರ ಬೆಳಗಿನಜಾವ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಸ್ಥಳಕ್ಕೆ ಉಪ ತಹಶೀಲ್ದಾರ್ ಆರ್.ರವಿ, ವಾರ್ಡಿನ ಪುರಸಭೆ ಸದಸ್ಯ ಬಿ.ಮಂಜುನಾಥ್ ಅವರು ನೀಡಿ ವೀಕ್ಷಣೆ ಮಾಡಿದರು. ಗೋವಿನಹಾಳ್ ಗ್ರಾಮದಲ್ಲಿ 2 ಮನೆ ಮತ್ತು ಹರಳಹಳ್ಳಿ, ಎಳೆಹೊಳೆ, ಬೂದಿಹಾಳ್ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳಿಗೆ ಭಾಗಶಃ ಹಾನಿ ಆಗಿದೆ ಎಂದು ವರದಿಯಾಗಿದೆ.
ಮಳೆ ಪ್ರಮಾಣ : ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ 6 ರವರೆಗೆ ಹರಿಹರ ತಾ.ನಲ್ಲಿ ಒಟ್ಟು 50 ಮೀ ಮೀ ಮಳೆಯಾಗಿದ್ದು, ಮಲೇಬೆನ್ನೂರಿನಲ್ಲಿ 22 ಮೀ ಮೀ ಮತ್ತು ಹೊಳೆ ಸಿರಿಗೆರೆಯಲ್ಲಿ 17 ಮೀ ಮೀ, ಕೊಂಡಜ್ಜಿಯಲ್ಲಿ
4 ಮೀ ಮೀ, ಹರಿಹರದಲ್ಲಿ 8 ಮೀ ಮೀ ಮಳೆ ಸುರಿದಿದೆ.