ಕರೂರು ಮತ್ತು ಬಾತಿ ಗ್ರಾಮಸ್ಥರ ಆರೋಪ
ದಾವಣಗೆರೆ, ಜು. 18- ಕರೂರು ಮಾರ್ಗವಾಗಿ ಬಾತಿಗೆ ಹೋಗುವ ಜಿಎಂಐಟಿ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರೈಲ್ವೇ ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ ಎಂದು ಕರೂರು ಮತ್ತು ಬಾತಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಸ್ತುತ ನಿರ್ಮಿಸಲಾಗುತ್ತಿರುವ ಕೆಳ ಸೇತುವೆಯಲ್ಲಿ ಬೈಕ್‌ಗಳು ಮಾತ್ರ ಓಡಾಡಲು ಸಾಧ್ಯವಾಗಿದೆ. ದೊಡ್ಡದಾದ ರಸ್ತೆಯಡಿ ಇಂತಹ ಚಿಕ್ಕದಾದ ಅಂಡರ್ ಪಾಸ್ ಮಾಡುವುದರ ಉಪಯೋಗ ವಾದರೂ ಏನು? ಈಗಾಗಲೇ ಹಲ ವಾರು ಅವೈಜ್ಞಾನಿಕ ಕಾಮಗಾರಿಗಳು ನಡೆದಿದ್ದು, ಇದೂ ಸಹ ಅವೈಜ್ಞಾನಿಕ ವಾಗಬಾರದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.