ಅಂಗನವಾಡಿ ಮಕ್ಕಳ ರಕ್ತ ಪರೀಕ್ಷಾ ಶಿಬಿರ

ಅಂಗನವಾಡಿ ಮಕ್ಕಳ ರಕ್ತ ಪರೀಕ್ಷಾ ಶಿಬಿರ

ದಾವಣಗೆರೆ, ಜು. 19 – ಎಲೆಬೇತೂರು ಗ್ರಾಮದ 5 ಅಂಗನವಾಡಿ ಕೇಂದ್ರಗಳಲ್ಲಿ ಎಸ್.ಎಸ್. ಕೇರ್‌ ಟ್ರಸ್ಟ್ ವತಿಯಿಂದ 66 ಮಕ್ಕಳನ್ನು ರಕ್ತ ಪರೀಕ್ಷೆಗೆ ಒಳಪಡಿಸಿ, 15 ಮಕ್ಕಳು ರಕ್ತದ ಕೊರತೆಯಿಂದ ಬಳಲುತ್ತಿರುವುದನ್ನು ಗುರುತಿಸಿ,  ಉಚಿತ ಐರನ್ ಸಿರಪ್ ವಿತರಿಸಲಾಯಿತು.

ಡಾ. ಪವಿತ್ರ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಪೋಷಕರನ್ನು ಕರೆಸಿ,  ಹಸಿ ತರಕಾರಿ, ಹಣ್ಣು ಹಾಗೂ ಹಾಲು ಕೊಡುವಂತೆ ಹಾಗೂ ಚಹಾ, ಕರಿದ ಪದಾರ್ಥಗಳಾದ ಚಿಪ್ಸ್, ಬೇಕರಿ ಪದಾರ್ಥಗಳನ್ನು ಕೊಡಬಾರದೆಂದು ತಿಳಿ ಹೇಳಿದರು.

ಎಸ್‌ಎಸ್‌ ಹೈಟೆಕ್ ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ. ಶೀಲಾ, ಡಾ. ಸ್ಫೂರ್ತಿ, ಡಾ. ಸ್ನೇಹ ಮೆಡಿಕಲ್ ಸೋಶಿಯಲ್ ವರ್ಕರ್ ನಾಗರಾಜ್, ಟ್ರಸ್ಟ್‌ನ ಬೇತೂರು ಗ್ರಾಮದ ಸ್ವಯಂ ಸೇವಕಿ ಎಂ.ಕೆ. ಮಮತಾ, ಆಲೂರುಹಟ್ಟಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಜಿ.ಬಿ. ಗಂಗಮ್ಮ, ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರ್,  ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಸುಧಾ, ಶ್ರೀಮತಿ ಹನುಮಂತಮ್ಮ, ಶ್ರೀಮತಿ ಅನ್ನಪೂರ್ಣಮ್ಮ, ಶ್ರೀಮತಿ ಕವಿತಮ್ಮ, ಶ್ರೀಮತಿ ರೇಣುಕಮ್ಮ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!