ಹರಿಹರ, ಜು. 17 – ಮೊಹರಂ ಹಬ್ಬದ ಅಂಗವಾಗಿ ಮುಸ್ಲಿಂ ಧರ್ಮದ ಶಿಯಾ ಪಂಗಡದವರು ಇಂದು ನಗರದಲ್ಲಿ ಬೃಹತ್ ಮೆರ ವಣಿಗೆ ನಡೆಸಿದರು.
ಟಿಪ್ಪು ನಗರದ ಅಂಜುಮನ್ ಜಹೇರಾ ಸಲಾಮುಲ್ಲಾ ಅಲೇಖಾನ ಮದರಾಸ ದರ್ಗಾ ದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮಧ್ಯಾಹ್ನ ಮೆರವಣಿಗೆ ಆರಂಭ ಮಾಡಿದರು.
ಮೆರವಣಿಗೆ ಟಿಪ್ಪು ನಗರದಿಂದ ಆರಂಭಗೊಂಡು, ಹರ್ಲಾಪುರ ಬಡಾವಣೆ, ಹರಪನಹಳ್ಳಿ ರಸ್ತೆ, ಗಾಂಧಿ ವೃತ್ತ, ಹಳೆ ಪಿ.ಬಿ. ರಸ್ತೆಯ ಮೂಲಕ ಸಂಚರಿಸಿ ತುಂಗ ಭದ್ರಾ ನದಿಗೆ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಯುವಕರು ತಮ್ಮ ದೇಹಕ್ಕೆ ಬ್ಲೇಡ್ ಸೇರಿದಂತೆ ಇತರೆ ಕಬ್ಬಿಣದ ಆಯುಧ ಗಳನ್ನು ಚುಚ್ಚಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದು ನಂತರ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೌಸರ್ ಅಲಿ, ಕಾರ್ಯದರ್ಶಿ ಮೌಸಿನ್ ಖಾನ್, ಮಾಲಾನಾ, ಅಬ್ಜರ್, ಅಬ್ಬಾಸ್, ಸೈಯದ್ ಅತಿಕ್, ಸಾಲೆಬ್ ಖಾನ್, ಬಾಬಾ ಖಾನ್ ಇತರರು ಹಾಜರಿದ್ದರು.