ದಾವಣಗೆರೆ, ಜು. 11- ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸೈಕಲ್ ಜಾಥಾವನ್ನು ದಾವಣಗೆರೆ ನಗರದ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ ಇವರ ನೇತೃತ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು
ಈ ಸಂದರ್ಭದಲ್ಲಿ ದಾವಣಗೆರೆ ಬೈಸಿಕಲ್ ಕ್ಲಬ್‌ನ ಅಧ್ಯಕ್ಷ ಪ್ರಸಾದ್ ಅಣ್ಣ, ಕಾರ್ಯದರ್ಶಿ ಮಹೇಶ್ ಮತ್ತು ಸಂಘದ ಖಜಾಂಚಿ ನೇತ್ರ ತಜ್ಞ ಡಾ. ಸುರೇಶ್, ಸದಸ್ಯರಾದ ಹರೀಶ್, ನಂದೀಶ್, ಕಿರಣ್ ಬಾಳೆಹೊಲದ ಇತರರು ಪಾಲ್ಗೊಂಡು ಯಶಸ್ವಿಯಾಗಿ ಜಾಗೃತಿ ಮೂಡಿಸಿದರು.