ದಾವಣಗೆರೆ, ಜು.11-ಮಳೆ ಮತ್ತು ಲೋಕಕಲ್ಯಾಣಾರ್ಥವಾಗಿ ನಗರದ ಎಪಿಎಂಸಿ ವರ್ತಕರ ಸ್ನೇಹ ಬಳಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಶೃಂಗೇರಿ ಹತ್ತಿರದಲ್ಲಿರುವ ತೀರ್ಥ ಮತ್ತೂರು ಮಠದಲ್ಲಿ ಇಂದು ವಿಶೇಷ ಪೂಜೆ ಮತ್ತು ಜಪ, ಹೋಮ ನಡೆಸಲಾಯಿತು.
ವಾಸಕಿ ಟ್ರಸ್ಟ್ ಮುಖ್ಯಸ್ಥರೂ, ಬ್ರಹ್ಮಾವರ ಗುರುಗಳೂ ಆದ ವೇದಮೂರ್ತಿ ಗುರೂಜಿ ಮುಂದಾಳತ್ವದಲ್ಲಿ ಸುನಿಲ್ ಆಚಾರ್ ಮತ್ತು ಗಣೇಶ್ ಆಚಾರ್ ಸಮ್ಮುಖದಲ್ಲಿ ಈ ಪೂಜೆ, ಹೋಮ ನೆರವೇರಿದವು.
ಎಪಿಎಂಪಿ ವರ್ತಕರುಗಳಾದ ಕೊರಟಿಕೆರೆ ಶಿವಕುಮಾರ್, ಅಣಬೇರು ಮಲ್ಲಿಕಾರ್ಜುನ್, ರಾಮಗೊಂಡನಹಳ್ಳಿ ಜಯಣ್ಣ, ಬನಶಂಕರಿ ಟ್ರೇಡರ್ಸ್‌ನ ಶಂಕ್ರಣ್ಣ, ಪ್ರಭುದೇವ ಬೆಳವನೂರು, ಶಿವಕುಮಾರ್ ಬೆಳವನೂರು, ಕರೇಶಿವಪ್ಳ ಸಿದ್ದೇಶ್, ಆರ್.ಜಿ. ರುದ್ರೇಶ್, ಐಗೂರು ವಿಜಯಕುಮಾರ್ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.