ದಾವಣಗೆರೆ, ಜು.10- ಜಿಗಳಿ ಗ್ರಾ.ಪಂ ಉಪಾಧ್ಯಕ್ಷರಾಗಿ ಡಿ.ಎಂ. ಹರೀಶ್ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿ.ಬೇವಿನಹಳ್ಳಿ ಹೋಬಳಿ ಆನಂದಗೌಡ ಅವರ ರಾಜೀನಾಮೆಯಿಂದಾಗಿ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ತೋಟಗಾರಿಕೆ ಇಲಾಖೆಯ ಶಶಿಧರಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಿ.ಡಿ.ಓ ಉಮೇಶ್, ಗ್ರಾ.ಪಂ. ಕಾರ್ಯದರ್ಶಿ ಸುನೀತಾ ಸಹಕರಿಸಿದರು. ಗ್ರಾ.ಪಂ ಅಧ್ಯಕ್ಷೆ ರೂಪಾ ಸೋಮಶೇಖರ್, ಸದಸ್ಯರಾದ ಆನಂದಗೌಡ, ಜಿ. ಬಸವರಾಜ್, ಮಲ್ಲನಗೌಡ, ಚೇತನ್, ಮಹಾಂತೇಶ್, ದೇವರಾಜ್, ಆಶಾ ಅಣ್ಣಪ್ಪ, ರೇಣುಕಮ್ಮ ರಂಗಪ್ಪ, ಕರಿಯಮ್ಮ, ಕವಿತಾ ಶಿವು, ಮಂಜುಳಾ ಪರಮೇಶ್ವರಪ್ಪ, ವಿನೋದ ಹಾಲೇಶ್, ರೇಣುಕಾ ನಾಗರಾಜ್, ಬಸಾಪುರದ ಹನುಮಂತಪ್ಪ ಮತ್ತು ಮುಖಂಡರಾದ ಡಿ.ಎಚ್. ಮಂಜುನಾಥ್, ಜಿ.ಆನಂದಪ್ಪ, ಬಿ.ಎಂ. ದೇವೇಂದ್ರಪ್ಪ, ಜಿ.ಎಂ. ಆನಂದಪ್ಪ, ಪತ್ರಕರ್ತ ಪ್ರಕಾಶ್, ಕೆಂಚಪ್ಪ ಮತ್ತಿತರರಿದ್ದರು.
January 7, 2025