ಕನ್ನಡ ಸಂಭ್ರಮ ರಥಕ್ಕೆ ಬಸವಾಪಟ್ಟಣದಲ್ಲಿ ಅದ್ಧೂರಿ ಸ್ವಾಗತ

ಕನ್ನಡ ಸಂಭ್ರಮ ರಥಕ್ಕೆ ಬಸವಾಪಟ್ಟಣದಲ್ಲಿ ಅದ್ಧೂರಿ ಸ್ವಾಗತ

ದಾವಣಗೆರೆ, ಜು. 8 – ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಚಾಲನೆ ನೀಡಿರುವ ಕರ್ನಾಟಕ ಸಂಭ್ರಮ-50 ರಥವು ಸೋಮವಾರ ಬಸವಾಪಟ್ಟಣ ಗ್ರಾಮದಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂ ತಪ್ಪ ಮಾತನಾಡಿ,  ನಾಡಿನಾದ್ಯಂತ ಸಂಚರಿ ಸುತ್ತಿರುವ ಕರ್ನಾಟಕ ಸಂಭ್ರಮ-50 ರಥವು ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ವೈವಿ ಧ್ಯತೆಯನ್ನು ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕನ್ನಡಿಗರಾದ ನಾವೆ ಲ್ಲರೂ ಒಂದೇ ಎಂಬ ಸೌಹಾರ್ದ ಸಂದೇಶ ವನ್ನು ಸಾರುವ ಈ ರಥವು ಕನ್ನಡ ತಾಯಿ ಭುವನೇಶ್ವರಿ ಮತ್ತು ನಾಡಿನ ಪ್ರಸಿದ್ಧ ಕವಿಪುಂಗ ರುಗಳ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ ಮನ ಬೆಳಗಲಿದೆ ಎಂದರು. 

ಕಸಾಪ ಅಧ್ಯಕ್ಷ ಎಲ್.ಜಿ. ಮಧುಕು ಮಾರ್ ಮಾತನಾಡಿ, ಸುಮಾರು 2000 ವ ರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕವು ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕವಾಗಿ ಶ್ರೀ ಮಂತ ಪರಂಪರೆಯನ್ನು ಹೊಂದಿದೆ. ಅಂತಹ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದೇ ಈ ಕರ್ನಾಟಕ ಸಂಭ್ರಮ-50ರ ಆಶಯವಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿ, ವಿವಿಧ ಭಾಷೆಗಳ ಆಧಾರದಲ್ಲಿ ಹಂಚಿ ಹೋಗಿದ್ದ ಕನ್ನಡ ನೆಲವನ್ನೆಲ್ಲ ಒಗ್ಗೂಡಿಸುವ ಪ್ರಯತ್ನಕ್ಕೆ ಪ್ರೇರಕವಾಗಿ ಕನ್ನಡ, ಕನ್ನಡಿಗರಲ್ಲಿ ಏಕತೆ ಕಾಪಾಡಲು ಈ ಕನ್ನಡ ರಥ ಸಫಲವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಉಪ ತಹಶಿಲ್ದಾರ್ ನೀಲಮ್ಮ, ಪಿಎಸ್‌ಐ ವೀಣಾ, ಬಿಆರ್‌ಸಿ ಡಾ. ಶಂಕರಪ್ಪ,   ಬಸವಾಪಟ್ಟಣ ಗ್ರಾ.ಪಂ. ಸರ್ವ ಸದಸ್ಯರುಗಳು, ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಕನ್ನಡ ಸಾಹಿತ್ಯ ಅಭಿಮಾನಿಗಳಾದ   ಸಂಗ ಮೇಶ್, ಶಿವರಾಜ್,  ಟಿ.ಸಿ. ಬಸವರಾಜ್, ಮಾರುತಿ,  ಎಜಾಜ್ ಅಹಮದ್ ಮತ್ತಿತರರು ರಥಯಾತ್ರೆಗೆ ಮೆರುಗು ತಂದರು.

ಚನ್ನಗಿರಿ ವರದಿ : ಸುವರ್ಣ ಕರ್ನಾಟಕ  ರಥ ಯಾತ್ರೆಯು ಬಸವಾ ಪಟ್ಟಣ ಮಾರ್ಗ ವಾಗಿ ಚನ್ನಗಿರಿ ಪಟ್ಟಣಕ್ಕೆ ಆಗಮಿಸಿತು. ಶಾಸಕ ಬಸವರಾಜು ವಿ. ಶಿವಗಂಗಾ ಅವರು ಭುವನೇ ಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಥವನ್ನು ಬರಮಾಡಿಕೊಂಡರು. ತಹಶೀಲ್ದಾರ್ ಎರ್ರಿಸ್ವಾಮಿ,  ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ, ಬಿಇಓ ಜಯಣ್ಣ ಹಾಗೂ ಇತರರು ಇದ್ದರು. 

error: Content is protected !!