ಹೊನ್ನಾಳಿ, ಜು. 8 – ತಾಲ್ಲೂಕಿನ ಮಾಸಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಎ. ವಸಂತಮ್ಮ ಅಶೋಕ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಸಹಕಾರಿ ಅಭಿವೃದ್ದಿ ಅಧಿಕಾರಿ ನವೀನಕುಮಾರ ತಿಳಿಸಿದ್ದಾರೆ. ಅರುಣಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಉಪಾಧ್ಯಕ್ಷ ಆರ್. ರಂಗನಾಥ, ಸದಸ್ಯ ಗಜೇಂದ್ರಪ್ಪ, ಹನುಮಂತಪ್ಪ, ಅರುಣಕುಮಾರ್, ರೇಣುಕಮ್ಮ, ಮಂಜಪ್ಪ, ಹನುಮಂತಪ್ಪ, ಗದುಗೆಪ್ಪ, ಮಾಸಡಿ ಗ್ರಾಮದ ಮುಖಂಡ ಸಿ.ಹೆಚ್. ಅಶೋಕ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಶ್ರೀನಿವಾಸ, ಡಿಸಿಸಿ ಬ್ಯಾಂಕ ಕ್ಷೇತ್ರಾಧಿಕಾರಿ ವಿಜಯಕುಮಾರ್, ಪ್ರಕಾಶ, ನಾಗರಾಜ ಇನ್ನಿತರರಿದ್ದರು.
ಮಾಸಡಿ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ವಸಂತಮ್ಮ ಆಯ್ಕೆ
