ಜಾಗತಿಕ ತಾಪಮಾನ ಕಡಿವಾಣಕ್ಕೆ ಮರ ಬೆಳೆಸಿ

ಜಾಗತಿಕ ತಾಪಮಾನ ಕಡಿವಾಣಕ್ಕೆ ಮರ ಬೆಳೆಸಿ

ದಾವಣಗೆರೆ, ಜೂ.7- ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮರಗಳನ್ನು ಬೆಳೆಸಿ ಎಂದು ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಮನವಿ ಮಾಡಿದರು.

ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೃಷಿಯನ್ನು ಖುಷಿಯಿಂದ ಮಾಡುವ ಮೂಲಕ ಭೂಮಿಯನ್ನು ಹಚ್ಚ ಹಸಿರನ್ನಾಗಿ ಸುವಲ್ಲಿ ಎಲ್ಲರು ಕಂಕಣಬದ್ಧರಾಗೋಣ ಎಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಮಾನವ ಒಂದು ಮರವನ್ನು ಕಡಿದು ಬಳಕೆ ಮಾಡಿಕೊಂಡರೆ ಅದಕ್ಕೆ ಪೂರಕವಾಗಿ ಪರಿಸರ ಸಮತೋಲನ ಕಾಪಾಡಲು 10 ಗಿಡಗಳನ್ನು ಬೆಳೆಸಲು ಪ್ರಯತ್ನಿಸೋಣ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ರಂಗರಾಜು ಮಾತನಾಡಿ, ಮನುಷ್ಯನ ಆಯಸ್ಸು ಹೆಚ್ಚಾಗಲು ಪ್ರಕೃತಿಯ ಸಹಕಾರ ಅತೀ ಮುಖ್ಯ. ಈ ನಿಟ್ಟಿನಲ್ಲಿ ಪರಿಸರವನ್ನು ನಾಶ ಮಾಡದೇ ಉಳಿಸಿ, ಬೆಳೆಸೋಣ ಎಂದು ಕರೆ ನೀಡಿದರು.

ಶಾಲೆಯ ಪ್ರಾಚಾರ್ಯೆ ಜೆ.ಎಸ್ ವನಿತಾ ಮಾತನಾಡಿ, ಪರಿಸರವು ಸಕಲ ಜೀವಿಗಳನ್ನು ಕಾಪಾಡುತ್ತದೆ. ಆದ್ದರಿಂದ  ಹೆಚ್ಚಾಗಿ ಗಿಡ, ಮರಗಳನ್ನು ಬೆಳೆಸುವ ಮೂಲಕ ಶಾಲೆಯ ಮಕ್ಕಳಿಂದ ಪರಿಸರ ಜಾಗೃತಿ ಮೂಡಿಸೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಥ ಮಿ ಕ ವಿಭಾಗದ ಮುಖ್ಯಸ್ಥ  ಶೀಬಾರಾಣಿ, ಪಿ.ವಿ. ಪ್ರಭು, ಆರ್‌. ಸವಿತಾ, ಶೈಕ್ಷಣಿಕ ಪರಿಶೋಧಕ ಎಂ. ವಾಸಿಮ್‌ ಪಾಷಾ, ಬೋಧಕ-ಬೋಧಕೇ ತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.

ವಿದ್ಯಾರ್ಥಿನಿ ಆರ್.ಜಿ.ಎಂ. ಸುದೀಕ್ಷಾ ನಿರೂಪಿಸಿದರು. ಎಚ್‌. ಭುವಿ ವಂದಿಸಿದರು.

error: Content is protected !!