ದಾವಣಗೆರೆ, ಜು.7- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ನಗರದ ಡಿಆರ್ಆರ್ ಸ್ಕೌಟ್ ಭವನದಲ್ಲಿ ಜಿಲ್ಲಾ ಮಟ್ಟದ (ಪದವಿ ಪೂರ್ವ ಉಪನ್ಯಾಸಕರ) ರೋವರ್, ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್‌ಗಳ ಸಭೆ ನಡೆಯಿತು.
2024-25ನೇ ಸಾಲಿನಲ್ಲಿ ಘಟಕಗಳ ಹೆಚ್ಚಳ, ಸೇವಾ ಕಾರ್ಯ ಚಟುವಟಿಕೆಯ ಹೆಚ್ಚಳ, ನಿಪುನ್ ಪರೀಕ್ಷಾ ತರಬೇತಿ, ಪದಕ ತರಬೇತಿ ಮತ್ತು ಚಾರಣ ಶಿಬಿರ ಆಯೋಜನೆ ಕುರಿತಂತೆ ವಾರ್ಷಿಕ ಚಟುವಟಿಕೆಯ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಎಂ. ರತ್ನಾ ಮತ್ತು ಎಸ್.ಜಿ.ವಿ ಅಶ್ವಿನಿ ತಿಳಿಸಿದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಪಿ. ಷಡಕ್ಷರಪ್ಪ, ಸಹಾಯಕ ಆಯುಕ್ತ ಎನ್.ಕೆ. ಕೊಟ್ರೇಶ್, ಸಹ ಕಾರ್ಯದರ್ಶಿ ಸುಖವಾನಿ, ಅಶ್ವಿನಿ ಮತ್ತು ಇತರರಿದ್ದರು.