ಆಹಾರ ಸಂಸ್ಕರಣೆಯಿಂದ ಕೃಷಿಗಿಂತ ಹೆಚ್ಚು ಉದ್ಯೋಗ ಸೃಷ್ಟಿ

ಆಹಾರ ಸಂಸ್ಕರಣೆಯಿಂದ ಕೃಷಿಗಿಂತ  ಹೆಚ್ಚು ಉದ್ಯೋಗ ಸೃಷ್ಟಿ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಉಪಸಭಾಪತಿ ರುದ್ರಪ್ಪ ಲಮಾಣಿ

ರಾಣೇಬೆನ್ನೂರು, ಜು.2-  ಕೃಷಿ ನಂತರ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಹಕಾರಿ ಸಂಘಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯ ಕೊಡಿಸಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಕಾರಿ ಸಂಘಗಳ ನೋಂದಣಿ ಪತ್ರ ವಿತರಣಾ ಸಮಾರಂಭದಲ್ಲಿ  ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಎಲ್ಲ ಶಾಸಕರು ಹಾಗೂ ನೂತನ ಲೋಕಸಭೆ ಸದಸ್ಯ ಬಸವರಾಜ ಬೊಮ್ಮಾಯಿ ಅವರ ಜೊತೆಗೂಡಿ ಮುಖ್ಯಮಂತ್ರಿಗಳ ಬಳಿ ತೆರಳಿ ಈ ಸಂಘಗಳ ಅವಶ್ಯಕತೆ ಹಾಗೂ ಅವುಗಳನ್ನು ಬಲಗೊಳಿಸಲು ಸರಿಯಾದ ಕಾರ್ಯತಂತ್ರ ರೂಪಿಸಿ, ಮಹಿಳೆಯರು ಸ್ವಾವಲಂಬಿ ಬದುಕು ಮಾಡಲು ಬಹಳಷ್ಟು ಸಹಕಾರಿ ಆಗುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು, ಅವಶ್ಯ ಅನುದಾನ  ಪಡೆದುಕೊಳ್ಳಬೇಕಿದೆ ಎಂದು ಹೇಳಿದ ರುದ್ರಪ್ಪ ಲಮಾಣಿ ಅವರ ಮಾತುಗಳನ್ನು ಶಾಸಕ ಪ್ರಕಾಶ ಕೋಳಿವಾಡ ಪುನರುಚ್ಛರಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಯಂ ಉದ್ಯೋಗಗಳನ್ನು  ಸೃಷ್ಟಿಸುವಲ್ಲಿ  ಪ್ರಯತ್ನಿಸಬೇಕು. ಇಂದು ಮಹಿಳೆಯರು ಕೃಷಿ ಆಧಾರಿತ ಉದ್ಯೋಗಗಳ ಜೊತೆ ಹೆಚ್ಚು ಲಾಭ ಗಳಿಸುವ ಉಪ ಕಸುಬುಗಳನ್ನು  ಕೈಗೊಂಡು  ಸುಖದ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು. ಪ್ರವರ್ತಕಿ ರುಕ್ಮಿಣಿ ಸಾವುಕಾರ, ಹನುಮಂತಗೌಡ ಹಿರೇಗೌಡ್ರ, ವಿಕ್ರಮ ಕುಲ್ಕರ್ಣಿ ಮತ್ತಿತರರಿದ್ದರು.

error: Content is protected !!