ಆರೋಗ್ಯಶ್ರೀ ಯಂಗ್‌ ಟೀಮ್‌ನಿಂದ ಯೋಗ ದಿನಾಚರಣೆ

ಆರೋಗ್ಯಶ್ರೀ ಯಂಗ್‌ ಟೀಮ್‌ನಿಂದ ಯೋಗ ದಿನಾಚರಣೆ

ಹರಪನಹಳ್ಳಿ, ಜೂ. 23- ಪಟ್ಟಣದ ಆರೋಗ್ಯಶ್ರೀ ಯಂಗ್ ಟೀಮ್‌  ಆಶ್ರಯದಲ್ಲಿ ಯೋಗ ದಿನ ಆಚರಿಸಲಾಯಿತು. ಮಹಿಳೆಯರು  ಯೋಗ ಪ್ರದರ್ಶಿಸಿ ಗಮನಸೆಳೆದರು.

ಮನುಷ್ಯನಿಗೆ ಆರೋಗ್ಯವೇ ಮುಖ್ಯ ಅದರಲ್ಲಿಯೂ ಇಂದು ಮಹಿಳೆಯರು ನಾನಾ ಒತ್ತಡಗಳಲ್ಲಿ ಬಳಲುತ್ತಿದ್ದಾರೆ.  ಈ ಸಮಸ್ಯೆಗಳಿಂದ ಹೊರಬರಬೇಕಾದರೆ, ಯೋಗವು ಅಷ್ಟೇ ಮುಖ್ಯವಾಗಿದೆ ಎಂದು ದೀಪಾ ಡಿ.ಹರೀಶ್ ಹೇಳಿದರು.  

ದೈಹಿಕ ಮತ್ತು ಮಾನಸಿಕವಾಗಿ ಸದೃಢತೆ ಹೊಂದಬೇಕಾದರೆ, ಯೋಗದಿಂದ ಮಾತ್ರ ಸಾಧ್ಯ. ಇದಕ್ಕೆ ವಯಸ್ಸಿನ ಅನುಗುಣವಾಗಿ ಅಭ್ಯಾಸ ಮಾಡಬೇಕು. ಇದರಿಂದ ದೇಹದ ರಕ್ತದ ಒತ್ತಡ ಮತ್ತು ಬುದ್ದಿಶಕ್ತಿಯು ಹೆಚ್ಚಿಸುತ್ತದೆ. ಎರಡು ವರ್ಷ ಗಳಿಂದ ಈ ತರಬೇತಿಯನ್ನು ಪಡೆಯುತ್ತಿರವುದಾಗಿ  ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀವಿದ್ಯಾ ಡಾ.ಹರೀಶ್ ಕಟ್ಟಿ, ಸುಮಾ ಫಣಿರಾಜ್, ಕಾವೇರಿ ಪ್ರಸಾದ್, ಅರಣಿ ಡಾ. ಮಧು, ಡಾ. ಪದ್ಮ ಡಿ.ವೆಂಕಟೇಶ್ ಮತ್ತಿತರರು ಯೋಗ ಪ್ರದರ್ಶಿಸಿದರು.

error: Content is protected !!