ಯಾವ ಪಕ್ಷಗಳಿಗೂ ರೈತರ ಬಗ್ಗೆ ಕಾಳಜಿ ಇಲ್ಲ

ಯಾವ ಪಕ್ಷಗಳಿಗೂ ರೈತರ ಬಗ್ಗೆ ಕಾಳಜಿ ಇಲ್ಲ

ನೀತಿಗೆರೆ ಗ್ರಾಮದಲ್ಲಿ ರೈತ ಸಂಘ-ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿದ ಹೆಚ್.ಆರ್.ಬಸವರಾಜಪ್ಪ

ಚನ್ನಗಿರಿ, ಜೂ.23-  ರೈತರ ಬಗ್ಗೆ  ಯಾವ ಪಕ್ಷಗಳಿಗೂ ಕಾಳಜಿ ಇಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ. ಸರ್ಕಾರ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ನೀಡುವಲ್ಲಿ   ಮತ್ತು  ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ವಿಫಲವಾಗಿರುವ ಬಗ್ಗೆ  ಕರ್ನಾಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ  ಹೆಚ್. ಆರ್. ಬಸವರಾಜಪ್ಪ ವ್ಯಾಕುಲತೆ ವ್ಯಕ್ತಪಡಿಸಿದರು.

 ತಾಲ್ಲೂಕಿನ ನೀತಿಗೆರೆ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಉತ್ತಮ ಸಂಘಟನೆಯಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಯಾಗಿದೆ. ಇಂದು ಬಗರ್ ಹುಕ್ಕುಂ ಜಮೀನುಗಳು ಉಳಿದಿವೆ ಎಂದರೆ ಅದಕ್ಕೆ ರೈತ ಸಂಘಗಳೇ ಕಾರಣವಾಗಿವೆ ಎಂದರು. 

ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಅರ್ಹರಿಗೆ ತಲುಪಿಸುವಲ್ಲಿ ಮತ್ತು ರೈತರ ಸಮಸ್ಯೆ ಆಲಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ನೀತಿಗೆರೆ ರೈತರು ಸಂಘಟಿತರಾ ಗಿರುವುದು ಉತ್ತಮ ಬೆಳವಣಿಗೆ ಆಗಿದೆ.

ವಿದ್ಯುತ್ ಶಕ್ತಿ ಖಾಸಗಿಕರಣ ಆಗುತ್ತಿರುವು ದನ್ನು ತಪ್ಪಿಸಲು ಸಾಕಷ್ಟು ರೂಪುರೇಷೆ ತಯಾರಿಸಿ ದ್ದೇವೆ. ಬ್ಯಾಂಕ್ ನವರು, ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣವು ರೈತರ  ಸಾಲಕ್ಕೆ  ಜಮೆ ಮಾಡಿಕೊಳ್ಳುತ್ತಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕಿಡಿಕಾರಿದರು.

ಬರಗಾಲವಿರುವುದರಿಂದ ಬ್ಯಾಂಕಿನವರು ರೈತರ ಸಾಲ ವಸೂಲಿಗೆ ಬಲವಂತ ಮಾಡಬಾರದು ಮತ್ತು ರೈತರ ಖಾತೆಗೆ ಬರುವ ಪರಿಹಾರದ ಹಣ, ವೃದ್ಧಾಪ್ಯ  ವೇತನ, ಹಾಲಿನ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಸರ್ಕಾರ‌ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ರೈತರೇ ಸ್ವಯಂ ವೆಚ್ಚ ಯೋಜನೆಯಡಿ ಐಪಿ ಸೆಟ್‌ಗಳನ್ನು ಹಾಕಿಸಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು, ಅಕ್ರಮ-ಸಕ್ರಮ ಕಾರ್ಯಗಳನ್ನು ತುರ್ತು ಮಾಡಬೇಕು, ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಾಸ್‌ ಪಡೆಯಬೇಕು ಎಂದು ಹೇಳಿದರು

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ, ರೈತರು ಒಗ್ಗಟ್ಟಾಗಿ ಇದ್ದರೆ ನಮ್ಮ ಸಮಸ್ಯೆಗಳನ್ನು ನಮ್ಮ ಸಂಘಟನೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ತಾಲ್ಲೂಕು ಅಧ್ಯಕ್ಷ ಮಲಹಾಳ್ ತಿಪ್ಪೇಶಪ್ಪ ಮಾತನಾಡಿ, ರೈತರು ಗುಲಾಮರಲ್ಲ ಎರಡು ವರ್ಷ ಬರಗಾಲ ಇದ್ದ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಿಡಿಗಾಸು ಅನುದಾನ ನೀಡಲಿಲ್ಲ. ಸರ್ಕಾರ ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದರೆ ರೈತರ ಗತಿ ಏನು ಎಂದು ಪ್ರಶ್ನಿಸಿದರು.

ತಾಲ್ಲೂಕು ಹಸಿರು ಸೇನೆಯ ಅಧ್ಯಕ್ಷ ರವಿ ಹಳ್ಳಿ,  ನೀತಿಗೆರೆ ಗ್ರಾಮ ಘಟಕದ ಅಧ್ಯಕ್ಷ ಎಂ.ವಿ ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀದೇವಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯ್ಕ್ ಕಬ್ಬಳ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಭಿಲಾಷ್‌ ಎಂ, ಸಂತೋಷ್, ನೀತಿಗೆರೆ ಗ್ರಾಮ ಘಟಕದ ಪದಾಧಿಕಾರಿಗಳಾದ ಎಂ. ಸಿದ್ದರಾಮಪ್ಪ, ಎಂ.ಎನ್ ಮಂಜಪ್ಪ, ಎಸ್.ಬಿ ಪ್ರಕಾಶ್, ಎಂ.ವಿ ಚಂದ್ರಪ್ಪ, ಎಂ.ಎಸ್ ಪರಮೇಶ್ವರಯ್ಯ, ಎಂ.ವಿ ಹಾಲೇಶಪ್ಪ, ಎಮ್.ಸಿ ಲಿಂಗೇಶ್, ಸಿದ್ದಪ್ಪ, ಮಲ್ಲಿಕಾರ್ಜುನ್, ಶೇಖರಪ್ಪ, ಗೌಡ್ರು ವೀರಪ್ಪ, ಗಣೇಶಚಾರ್ಯ, ಯೋಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!