ಹರಪನಹಳ್ಳಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಷಾ ರಾಣಿ
ಹರಪನಹಳ್ಳಿ,ಜೂ.21- ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಯೋಗದಿಂದ ಆಗುವ ಅನುಕೂಲ ಹಾಗೂ ಪ್ರಯೋಜನಗಳ ಬಗ್ಗೆ ನಾವು ಮನವರಿಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಷಾ ರಾಣಿ .ಆರ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ತಾಲ್ಲೂಕು ಸೇವಾ ಸಮಿತಿ, ವಕೀಲರ ಸಂಘ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ ಕೆಲ ಸಮಯ ಯೋಗದಲ್ಲಿ ತೊಡಗಿ ಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ಜೊತೆಗೆ ಬದುಕಿನಲ್ಲಿ ಸದಾ ಕ್ರಿಯಾಶೀಲತೆ, ಓದು, ವೃತ್ತಿ ಸೇರಿದಂತೆ ಮಾಡುವ ಯಾವುದೇ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಪೂರಕವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಮಾತನಾಡಿ, ಯೋಗ ಎಂಬುದು ಶರೀರಕ್ಕೆ ಅನುಗುಣವಾಗಿ ಮಾಡುವ ಅಭ್ಯಾಸ ವಾಗಿದ್ದು, ದೇಹದ ರಜಸ್ಸು, ತಮಸ್ಸು, ಸಾಮ ವನ್ನು ನಿಗ್ರಹಿಸುವ ಸಲುವಾಗಿ ವಯಸ್ಸಿಗೆ ಅನು ಗುಣವಾಗಿ ಅಭ್ಯಾಸ ಮಾಡಲಾಗುವುದು. ದೇಹ, ಮನಸ್ಸು, ಬುದ್ಧಿಯನ್ನು ಹತೋಟಿಯ ಲ್ಲಿಡಲು ಯೋಗವನ್ನು ಅಭ್ಯಾಸ ಮಾಡಬೇಕು. ಇದರಿಂದ ಸಂಸ್ಕಾರ ಬೆಳೆಯುತ್ತದೆ. ಮನಸ್ಸು ಚಿತ್ತದಲ್ಲಿದ್ದು, ಮಾನಸಿಕ, ದೈಹಿಕವಾಗಿ ಸದೃಢ ಆರೋಗ್ಯ ಲಭಿಸುತ್ತದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಮನು ಶರ್ಮ ಎಸ್.ಪಿ., ಯೋಗ ಶಿಕ್ಷಕ ಲೋಕೇಶ್ ಎಸ್.ಟಿ ಮಾತನಾಡಿದರು. ವಕೀಲದ ಸಂಘದ ಕಾರ್ಯ ದರ್ಶಿ ಜಿ.ಎಸ್.ಎಂ.ಕೊಟ್ರಯ್ಯ, ಹಿರಿಯ ವಕೀಲ ಪಿ.ಜಗದೀಶ್ ಗೌಡ್ರು, ಎಂ.ಮೃತ್ಯುಂಜಯ, ಬಿ.ಹಾಲೇಶ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೊಟ್ರೇಶ್, ಬಸವರಾಜ ಸೇರಿದಂತೆ ಉಭಯ ನ್ಯಾಯಾಲಯದಗಳ ನ್ಯಾಯಾಧೀಶರು ಹಾಜರಿದ್ದರು.