ದಾವಣಗೆರೆ, ಜೂ. 23 – ವಿದ್ಯಾನಗರದ ದಿ ಡ್ರಾಗನ್ ವಾರಿಯರ್ಸ್ ಅಸೋಸಿಯೇಷನ್ ಕರಾಟೆ ಶಾಲೆಯ ಕರಾಟೆ ಕಲರ್ ಬೆಲ್ಟ್ ಪರೀಕ್ಷಾ ವಿವಿಧ ಹಂತಗಳ ಪರೀಕ್ಷೆ ನಡೆದವು. ತೇರ್ಗಡೆ ಹೊಂದಿದ ಪಟುಗಳಿಗೆ ಪ್ರಶಸ್ತಿ ಪತ್ರ ಹಾಗೂ ಬೆಲ್ಟ್ ವಿತರಣೆಯು ವಿದ್ಯಾನಗರ ಪಾರ್ಕಿನಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ಬಾ.ಮ. ಬಸವರಾಜಯ್ಯ, ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ ಬಿ. ದಿಳ್ಳೆಪ್ಪಇವರ ಸಮ್ಮುಖದಲ್ಲಿ ನಡೆಯಿತು. ತರಬೇತುದಾರ ಶಿಕ್ಷಕ ಸಾದಿಕ್ ಪಾಷ ಉಪಸ್ಥಿತರಿದ್ದರು. ಕ್ರೀಡಾಪಟುಗಳಾದ ಆರ್. ಗಗನ್, ಋಷಿಕೇಶ್, ಎಂ. ಸುಕೃತ್, ದಕ್ಷ ಆರ್ಯ, ಸುಜಯ್ ಗೌಡ, ರೋಹಿತ್ ಗೌಡ, ಆದಿತ್ಯ ನಳಿನ್ ಶರ್ಮ, ಸಾತ್ವಿಕ, ಧನ್ಯತಾ, ಸಂವೇದ್, ಫಲ್ಗುಣ ಅಂಗಡಿ ಅವರುಗಳು ಬೆಲ್ಟ್ ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡರು.
ಕರಾಟೆ ಶಾಲೆಯ ಕರಾಟೆ ಕಲರ್ಸ್ ಬೆಲ್ಟ್ ಪರೀಕ್ಷೆಗಳು
