ಚಿತ್ರದುರ್ಗ, ಜೂ. 16- ಹತ್ಯೆಯಾಗಿರುವ ರೇಣುಕಸ್ವಾಮಿ ಅವರ ಮನೆಗೆ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಇಂದು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಜಗದ್ಗುರುಗಳು, ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ರೇಣುಕಸ್ವಾಮಿ ಕುಟುಂ ಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಜೊತೆಗೆ ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಗೃಹ ಸಚಿವರಾಗಲೀ, ಮುಖ್ಯ ಮಂತ್ರಿಗಳಾಗಲೀ ಕುಟುಂಬದವರನ್ನು ಭೇಟಿ ಮಾಡಿ, ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರಲ್ಲದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೃತ ರೇಣುಕಸ್ವಾಮಿ ತಂದೆ ಕಾಶಿನಾಥಸ್ವಾಮಿ ಶಿವನಗೌಡರು, ತಾಯಿ ರತ್ನಪ್ರಭಾ ಹಾಗೂ ಅವರ ಕುಟುಂಬದವರು ಇದ್ದರು.