ಹೊನ್ನಾಳಿ ತಾಲ್ಲೂಕು ಸೊರಟೂರು ಗ್ರಾ.ಪಂ ಅಧ್ಯಕ್ಷರಾಗಿ ಪರಶುರಾಮ್ ಆಯ್ಕೆ

ಹೊನ್ನಾಳಿ ತಾಲ್ಲೂಕು ಸೊರಟೂರು  ಗ್ರಾ.ಪಂ ಅಧ್ಯಕ್ಷರಾಗಿ ಪರಶುರಾಮ್ ಆಯ್ಕೆ

ಹೊನ್ನಾಳಿ, ಜೂ.16- ತಾಲ್ಲೂಕಿನ ಸೊರಟೂರು ಗ್ರಾ.ಪಂ ಅಧ್ಯಕ್ಷರಾಗಿ ಎಂ.ಹೆಚ್.ಪರಶುರಾಮ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ವಿಶ್ವನಟೇಶ್ ಘೋಷಿಸಿದರು. ಹಿಂದಿನ ಅಧ್ಯಕ್ಷರಾಗಿದ್ದ ಜಿ.ಬಸವನಗೌಡ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬೇರೆ ಸದಸ್ಯರು ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಪರಶುರಾಮ್  ಅಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಿ.ಬಸವನಗೌಡ ಪಾಟೀಲ್, ಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ವಿರೂಪಾಕ್ಷಪ್ಪ, ಹನುಮಂತಪ್ಪ, ಮರಿಯಪ್ಪ, ರಾಧಮ್ಮ, ನಾಗರತ್ನಬಾಯಿ, ಕೆಂಚಮ್ಮ, ರಂಜಿತಾ, ಸುಮಾ, ಪಿಡಿಒ ಎನ್.ನಾಗರಾಜ್, ಕಾರ್ಯದರ್ಶಿ ಹಳದಪ್ಪ ಗ್ರಾಮದ ಮುಖಂಡ ರಾದ ಪಿ.ಸಿ.ಸತೀಶ್, ಹನುಮಪ್ಪಗೌಡ, ಎನ್.ನಾಗೇಶ್‍ರಾವ್, ಪಿ.ಪರಮೇಶ್ವರಪ್ಪ, ಎ.ವಾಸು ದೇವಾಚಾರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!