ಹಾವೇರಿ,ಜೂ.13- ತಾಲ್ಲೂಕಿನ ಅಗಡಿ ಶ್ರೀ ಶೇಷಾಚಲ ಸದ್ಗುರು ಪ್ರೌಢ ಶಾಲೆ ಪ್ರಾರಂಭಿಸಿ 50 ವರ್ಷಗಳಾಗಿದ್ದು, ಬರುವ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಸುವರ್ಣ ಮಹೋತ್ಸವ ಸಮಾರಂಭವನ್ನು ಆಡಂಬರಕ್ಕಿಂತ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶ್ರೀ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆನಂದ ವನದ ಗುರುದತ್ತ ಮೂರ್ತಿ ಚಕ್ರವರ್ತಿ ಶ್ರೀಗಳು ಹೇಳಿದರು.
ಎರಡು ದಿನದ ಈ ಸಮಾರಂಭದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿದ್ದು, ಸುವರ್ಣ ಭವನ ನಿರ್ಮಾಣ, ಸ್ಮರಣ ಸಂಚಿಕೆ, ತಾಂತ್ರಿಕ ಕಾಲೇಜು ಸ್ಥಾಪನೆ, ರಕ್ತದಾನ, ನೇತ್ರದಾನ ಶಿಬಿರ, ರಸ್ತೆಗಳಲ್ಲಿ ಗಿಡ ನೆಡುವ ಮುಂತಾದ ಕಾರ್ಯಕ್ರಮಗಳ ಜೊತೆಗೆ ಸುವರ್ಣ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಶ್ರೀಗಳು ವಿವರಿಸಿದರು.
ಸಭೆಯಲ್ಲಿ ಹನುಮಂತಗೌಡ ಗೊಲ್ಲರ, ಹನುಮಂತ ದಾಸರ, ಚಂದ್ರು ಈಳಿಗೇರ, ನಾಗರಾಜ ಬಸೇಗಣ್ಣಿ, ಶಿವಣ್ಣ ಬಸೇಗಣ್ಣಿ, ನಿಜಲಿಂಗಪ್ಪ ಬಸೇಗಣ್ಣಿ, ರೇಣುಕಾ ಹಲಗಣ್ಣನವರ, ಐ.ಡಿ. ನದಾಫ್, ಅಕ್ಕಮ್ಮ ಕುಲಕರ್ಣಿ ಮತ್ತಿತರರಿದ್ದರು.