ಬೆಂಗಳೂರು, ಜೂ. 12- ಕೇಂದ್ರ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿ ರುವ ಹೆಚ್.ಡಿ. ಕುಮಾರಸ್ವಾಮಿ, ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ವಿ. ಸೋಮಣ್ಣ ಮತ್ತು ಕಾರ್ಮಿಕ ಹಾಗೂ ಸಣ್ಣ, ಮಧ್ಯಮ ಕೈಗಾರಿಕೆ ಇಲಾಖೆಯ ರಾಜ್ಯಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರನ್ನು ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಅವರು ಬುಧವಾರ ನವದೆಹಲಿಯಲ್ಲಿ ಸನ್ಮಾನಿಸಿ, ಅಭಿನಂದಿಸಿದರು. ಜೆಡಿಎಸ್ ಮುಖಂಡ ಸಿರಿಗೆರೆ ಹಾಲೇಶ್‌ಗೌಡ, ಮಲೇಬೆನ್ನೂರಿನ ಬಿ.ವಿ. ರುದ್ರೇಶ್, ಬಿ.ಸಿ. ಸತೀಶ್, ಕಾರಿಗನೂರು ಭರತ್ ಈ ವೇಳೆ ಹಾಜರಿದ್ದರು.
January 8, 2025