ದಾವಣಗೆರೆ, ಜೂ.11- ಶಿವಮೊಗ್ಗದಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದಾವಣಗೆರೆ ತಾಲ್ಲೂಕಿನ ಚಿನ್ನಸಮುದ್ರ ಗ್ರಾಮದ ಹಿರಿಯ ಜಾನಪದ ಗಾಯಕ ಉಮೇಶ ನಾಯ್ಕ್ ಅವರ ಅಭಿನಂದನಾ ಗ್ರಂಥ `ಸುಗ್ಗಿ ಕಾಲ ಬಂತು ಜಾನಪದ ಲೋಕದಲ್ಲಿ’ ಕೃತಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೊಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ್, ಸಂಸದ ಉಮೇಶ ಜಾದವ್, ಬಂಜಾರ ಧರ್ಮ ಗುರುಗಳಾದ ಶ್ರೀ ಬಾಬುಸಿಂಗ್ ಮಾಹಾರಾಜ್ ಪೌರಾಡ ಶ್ರೀಗಳು, ಸಿದ್ಧಲಿಂಗ ಶ್ರೀಗಳು, ಹೊನ್ನಾಳಿ ಶಾಸಕ ಶಾಂತನಗೌಡ, ಮುಖಂಡರಾದ ಪ್ರಕಾಶ್ ರಾಥೋಡ್, ಮಾಜಿ ಶಾಸಕ ಭೀಮಾನಾಯ್ಕ, ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಮತ್ತು ಸಮಾಜದ ಮುಖಂಡರು ಇದ್ದರು.