ಮಳೆ : ಮನೆಗಳಿಗೆ ನುಗ್ಗಿದ ಚರಂಡಿ ನೀರು – ಜನರ ಆಕ್ರೋಶ

ಮಳೆ : ಮನೆಗಳಿಗೆ ನುಗ್ಗಿದ ಚರಂಡಿ ನೀರು – ಜನರ ಆಕ್ರೋಶ

ಹರಿಹರ, ಜೂ.6- ನಗರದಲ್ಲಿ ಇಂದು ಸಂಜೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ 30 ನೇ ವಾರ್ಡ್ ವಿದ್ಯಾನಗರ ಸಿ ಬ್ಲಾಕ್ 4  ಕ್ರಾಸ್ ನಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಚರಂಡಿ ನೀರು ಮನೆಗಳಿಗೆ ನುಗ್ಗಿದ್ದರಿಂದ, ಸ್ಥಳೀಯ ನಿವಾಸಿಗಳು ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ  ಶಿವನಗೌಡ  ಅವರು, ವಿದ್ಯಾನಗರದ ಸಿ ಬ್ಲಾಕ್ 4 ಕ್ರಾಸ್ ನಲ್ಲಿ ಇರುವ ಚರಂಡಿಗೆ ಇಂದ್ರಾನಗರ, ಸರ್ಕಾರಿ ಆಸ್ಪತ್ರೆ, ಏರಿಯಾ, ಸೇರಿದಂತೆ ಹಲವು ಬಡಾವಣೆಯ ಚರಂಡಿ ನೀರು  ಇಲ್ಲಿಂದಲೇ ಮುಂದೆ ದೊಡ್ಡಾಗಿರುವ ರಾಜಕಾಲುವೆ ಸೇರುತ್ತದೆ ಎಂದರು.

ಹಲವಾರು ಬಡಾವಣೆಯ ನೀರು ಇಲ್ಲಿಂದಲೇ ಹರಿದುಹೋಗು ವುದರಿಂದ ಚರಂಡಿ ಚಿಕ್ಕದಾಗಿ ಇರೋದಕ್ಕೆ ಮಳೆ ಬಂದಾಗ ಮನೆ ಗಳಿಗೆ ನೀರು ನುಗ್ಗುತ್ತದೆ ಮತ್ತು ರಸ್ತೆಯಲ್ಲಿ ಸಾಕಷ್ಟು ಕಸ ಇರುತ್ತದೆ. ಇದರಿಂದ ಮನೆಗಳಿಗೆ ಓಡಾಡುವುದು ಕಸವನ್ನು ತುಳಿದುಕೊಂಡು ಓಡಾಡುವಂತೆ ಆಗುತ್ತದೆ. ಇವತ್ತು ಮಳೆ ಬಂದಾಗ ಸಿರಿಗೆರೆ ಬಸವನಗೌಡ್ರು ಮನೆ ಸಂಪೂರ್ಣ ನೀರಿನಲ್ಲಿ ಆವರಿಸಿಕೊಂಡು ನೀರನ್ನು ಹೊರಗಡೆ ಸಾಗಿಸಲು ಹರ ಸಾಹಸ ಪಟ್ಟಿದ್ದಾರೆ. 

ಇದರಿಂದಾಗಿ ಸ್ಥಳೀಯ ವಾರ್ಡ್ ಸದಸ್ಯರಾದ ಅಶ್ವಿನಿ ಕೃಷ್ಣ ರವರೆಗೆ  ಗಮನಕ್ಕೆ ತಂದಾಗ, ಅವರು ಡೆಸ್ಕ್ ಸ್ಕ್ಯಾಬ್ ಮಾಡಿಸುವುದಾಗಿ ಚರಂಡಿ ಕಾಮಗಾರಿಯನ್ನು ಆರಂಭಸಿದಾಗ ಏನೋ ತಾಂತ್ರಿಕ ದೋಷದಿಂದಾಗಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಪರಿಣಾಮ, ಚರಂಡಿ ಒಡೆದು  ಜಲ್ಲಿಯನ್ನು ಚರಂಡಿ ಪಕ್ಕದಲ್ಲಿ ಹಾಕಿ ಕಾಮಗಾರಿ ಸ್ಥಗಿತಗೊಳಿಸಿದ್ದಕ್ಕೆ ಮಳೆ ಬಂದಾಗ ಚರಂಡಿ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗತ್ತಿದೆ ಎಂದು ಹೇಳಿದ್ದಾರೆ.

ಸಂಜೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ನಗರಸಭೆಯ ಸದಸ್ಯರಾದ ಅಶ್ವಿನಿ ಕೃಷ್ಣ ರವರ ಮನೆಗೆ ಕಸವನ್ನು ಪುಟ್ಟಿಯಲ್ಲಿ ತೆಗೆದುಕೊಂಡು ಹೋಗಿ ಅವರ ಮನೆಯ ಮುಂದೆ ಹಾಕೋದು ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಅಷ್ಟರಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದರಿಂದ ನಾಳೆ ನಗರಸಭೆಯ ಅಧಿಕಾರಿಗಳಿಗೆ ಚರಂಡಿ ಆದಷ್ಟು ಬೇಗನೆ ದುರಸ್ತಿ ಪಡಿಸುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರವಿಗೌಡ, ನಾರಯಣ, ಸಚ್ಚಿನ್, ಯುವರಾಜ್, ಅರುಣ್ ಕುಮಾರ್, ರವಿಕುಮಾರ್ ಮಂಜುನಾಥ್, ಇತರರು ಹಾಜರಿದ್ದರು.

error: Content is protected !!