ಭಿತ್ತಿಚಿತ್ರ, ಭಿತ್ತಿಪತ್ರ ಎರಡೂ ಒಂದೇ : ಹರೀಶ್‌

ಭಿತ್ತಿಚಿತ್ರ, ಭಿತ್ತಿಪತ್ರ ಎರಡೂ ಒಂದೇ : ಹರೀಶ್‌

ದಾವಣಗೆರೆ, ಜೂ.2- ಭಿತ್ತಿಚಿತ್ರ ಮತ್ತು ಭಿತ್ತಿಪತ್ರ ಎರಡು ಒಂದೇ ಸ್ವರೂಪ ಎಂದು ದೃಶ್ಯಕಲಾ ಮಹಾವಿದ್ಯಾಲಯದ ಎಸ್‌.ಎಚ್‌. ಹರೀಶ್‌ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ  ನಡೆದ `ಭಿತ್ತಿಚಿತ್ರ ಕಲಾ ಶಿಬಿರ’ದಲ್ಲಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ `ಸಮಾಜದಲ್ಲಿ ಭಿತ್ತಿಪತ್ರಗಳ ಮಹತ್ವ’ ವಿಷಯ ಕುರಿತು ಮಾತನಾಡಿದರು.

ಭಿತ್ತಿಚಿತ್ರಗಳು ಚಿತ್ರದ ಸಹಾಯದಿಂದ ಮಾಹಿತಿ ನೀಡಿದರೇ ಭಿತ್ತಿಪತ್ರಗಳು ಅಕ್ಷರಗಳ ಮೂಲಕ ಮಾಹಿತಿ ನೀಡುತ್ತವೆ ಎಂದು ವ್ಯತ್ಯಾಸ ತಿಳಿಸಿದರು. 

ಭಿತ್ತಿಪತ್ರಗಳು ಜಾಹೀರಾತು, ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕವಾಗಿ ಜನರಿಗೆ ಸರಳ ಹಾಗೂ ಆಕರ್ಷಕವಾಗಿ ಮಾಹಿತಿ ತಲುಪಿಸುತ್ತಿವೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಭಿತ್ತಿಪತ್ರಗಳು ನಾಟಕ, ಹಬ್ಬ, ಸರ್ಕಸ್‌ ಹಾಗೂ ಜಾತ್ರೆಯಂ ತಹ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಸಲು ಬಳಸುತ್ತಿ ದ್ದಾರೆ ಎಂದು
ವಿವರಿಸಿದರು.

ಆದಿ ಮಾನವನ ಕಾಲದಲ್ಲೂ ಭಿತ್ತಿಗಳು ಸಂವಹನ ಮಾಡುತ್ತಿದ್ದವು ಎಂದ ಅವರು, ಅಶೋಕ ಚಕ್ರವರ್ತಿಯು ಕಲ್ಲುಗಳಲ್ಲಿ ಅಕ್ಷರ ಕೆತ್ತಿಸಿದ ಬಗ್ಗೆ ವಿವರಿಸಿದರು.

ಇದೇ ವೇಳೆ ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ ಅವರ ಸಾವಿಗೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್‌ ಎಂ. ಚಿಕ್ಕಪಾಟೀಲ್‌, ಶಿಬಿರಾಧಿಕಾರಿ ಡಾ. ಸತೀಶ್‌ ಕುಮಾರ್‌ ಪಿ. ವಲ್ಲೇಪುರೆ, ಸಹ ಶಿಬಿರಾರ್ಥಿ ಡಾ.ಎಂ.ಕೆ. ಗಿರೀಶ್‌ ಕುಮಾರ್‌, ಬೋಧನಾ ಸಹಾಯಕರಾದ ರಂಗನಾಥ್‌ ಕುಲಕರ್ಣಿ, ದತ್ತಾತ್ರೇಯ ಎನ್‌. ಭಟ್‌, ನವೀನ್‌ ಕುಮಾರ್‌, ಅರುಣ್‌ ಕುಮಾರ್‌, ರವೀಂದ್ರ ಕಮ್ಮಾರ್‌ ಹಾಗೂ ವಿದ್ಯಾರ್ಥಿಗಳು ಇದ್ದರು. ಶಾರದಾ ಪ್ರಾರ್ಥನೆ ಮಾಡಿದರು. ಕಾವ್ಯ ಸ್ವಾಗತಿಸಿದರು.

error: Content is protected !!