ಹುಬ್ಬಳ್ಳಿಗೆ ಆಗಮಿಸುವ ರೈಲುಗಳ ಸಮಯ ಬದಲಾವಣೆ

ಹುಬ್ಬಳ್ಳಿಗೆ ಆಗಮಿಸುವ  ರೈಲುಗಳ ಸಮಯ ಬದಲಾವಣೆ

ಹುಬ್ಬಳ್ಳಿ, ಮೇ 29- ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದೆ. ಈ ರೈಲುಗಳ ಬದಲಾವಣೆಯು ಕೆಳಗೆ ತಿಳಿಸಿದ ಪ್ರಯಾಣದ ದಿನಾಂಕಗಳಿಂದ ಜಾರಿಗೆ ಬರಲಿದೆ.

ಬರುವ ಜೂನ್ 21 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16532 ಕೆಎಸ್ಆರ್ ಬೆಂಗಳೂರು – ಅಜ್ಮೀರ್ ಗರೀಬ್ ನವಾಜ್  ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00 – 06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂನ್ 22 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16506 ಕೆಎಸ್ಆರ್ ಬೆಂಗಳೂರು – ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00 – 06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂನ್ 23 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು – ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ  06:00 – 06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂನ್ 24 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16508 ಕೆಎಸ್ಆರ್ ಬೆಂಗಳೂರು – ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00 – 06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂನ್ 25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16210 ಮೈಸೂರು – ಅಜ್ಮೀರ್  ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00 – 06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಸುಗಮ ಮತ್ತು ತೊಂದರೆ ರಹಿತ ಪ್ರಯಾಣ ಬೆಳೆಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಿ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಸಾರ್ವಜನಿಕರಿಗೆ ತಿಳಿಸಿದ್ದಾರೆ.

error: Content is protected !!