ಅಂಜಲಿ ಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಅಂಜಲಿ ಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ನಗರದಲ್ಲಿ ಜಿಲ್ಲಾ ಗಂಗಾಮತಸ್ಥ (ಬೆಸ್ತ) ಸಮಾಜದಿಂದ ಪ್ರತಿಭಟನೆ

ದಾವಣಗೆರೆ, ಮೇ 24- ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ, ಅಂಜಲಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾ ಗಂಗಾಮತಸ್ಥ (ಬೆಸ್ತ) ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಮಾಗಾನಹಳ್ಳಿ ಬಿ.ಕೆ. ಮಂಜುನಾಥ್ ಮಾತನಾಡಿ, ಹುಬ್ಬಳ್ಳಿಯ ಅಂಜಲಿ ಅಂಬಿಗೇರ್ ಮತ್ತು ನೇಹ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಅದೇ ಗ್ರಾಮದ ಗಂಗಾಮತಸ್ಥ ಸಮುದಾಯದ ಅಂಜಲಿ ಅಂಬಿಗೇರ್ ಹತ್ಯೆ ನಡೆದಿರುವುದು ಆತಂಕವನ್ನುಂಟು ಮಾಡಿದೆ. ಅಂಜಲಿ ಹತ್ಯೆ ಪ್ರಕರಣವನ್ನು ಜಿಲ್ಲಾ ಗಂಗಾಮತಸ್ಥ ಸಮಾಜವು ತೀವ್ರವಾಗಿ ಖಂಡಿಸುತ್ತದೆ ಎಂದರು.

ಆರೋಪಿಯು ಯುವತಿಯನ್ನು ಪ್ರೀತಿಯ ನೆಪದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂಬ ವಿಷಯವನ್ನು ಪೊಲೀಸರ ಹಾಗೂ ಕುಟುಂಬದವರ ಗಮನಕ್ಕೆ ತಂದರೂ ಸಹ ಇದನ್ನು ಸಾಮಾನ್ಯ ಪ್ರಕರಣದಂತೆ ಪರಿಗಣಿಸಿರುವುದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ತನವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಪೊಲೀಸರ ಗಮನಕ್ಕೆ ಬಂದ ಕೂಡಲೇ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಿದ್ದರೆ ಒಂದು ಜೀವ ಉಳಿಯುತ್ತಿತ್ತು. ಆರೋಪಿಯು ಅಂಜಲಿ ಅಂಬಿಗೇರ್ ಅವರನ್ನು ಏಕಾಏಕಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿರುವುದು ಸಾಮಾಜಿಕ ಭದ್ರತೆಯಿಲ್ಲದೇ ಸಮಾಜವು ಭಯಪಡುವಂತಾಗಿದೆ. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಮೃತಳ ಅವಲಂಬಿತರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗಂಗಾ ಮತಸ್ಥ ಸಮಾ ಜದ ಪದಾಧಿಕಾರಿಗಳಾದ ಮಡ್ಡೇರ ಹನುಮಂತಪ್ಪ, ಜೆ. ಉಮೇಶ್, ಟಿ. ಮಂಜುನಾಥ ಪುಟಗನಾಳ್, ಸಿ.ವಿ. ಅಂಜಿನಪ್ಪ ಬಾತಿ, ಹೆಚ್.ಕೆ. ಯೋಗರಾಜ್, ಪುಟ್ಟರಂಗಸ್ವಾಮಿ, ಬಿ. ರಾಮಪ್ಪ, ಕೃಷ್ಣಮೂರ್ತಿ, ಕರ್ಡೆಪ್ಪರ ಬಸವರಾಜಪ್ಪ, ಕೋಲ್ಕುಂಟೆ ಅಶೋಕ್, ಹರೀಶ್ ಓಲೇಕಾರ್, ರವಿಕುಮಾರ್, ಲಿಂಗರಾಜ್, ಮಲೇಬೆನ್ನೂರು ಮಂಜಣ್ಣ, ಅಶೋಕಪ್ಪ ಮಾಸ್ತರ್, ಎಸ್.ಎಂ. ಸುರೇಶ್ ಮತ್ತಿತರರಿದ್ದರು.

error: Content is protected !!