ಹರಪನಹಳ್ಳಿ, ಮೇ 19- ಕಂಚಿಕೆರೆ ಗ್ರಾಮದ ಶ್ರೀಕ್ಷೇತ್ರ ಬಿದ್ದಹನುಮ ಪ್ಪನಮಟ್ಟಿ ಶ್ರೀ ವೀರಾಂ ಜನೇಯ ಮಹಾ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ರಾದ ಶ್ರೀ ಬಸವರಾಜ ಗುರೂಜಿಯವರು ಸಮಿತಿ ಸದಸ್ಯರೊಂದಿಗೆ ಮತ್ತಿಹಳ್ಳಿ ಗ್ರಾಮದ ಅನುಭಾವಿ ಶತಾ ಯುಷಿ ವಿ. ಸಿದ್ದರಾಮಣ್ಣ ಶರಣರ ಮಹಾಮನೆಗೆ ಭೇಟಿ ನೀಡಿ ನೆನಪಿನ ಕಾಣಿಕೆ ಮತ್ತು ಗುರು ಕಾಣಿಕೆಯೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲ ಮಾತನಾಡಿದ ಸಿದ್ದರಾಮಣ್ಣ ಶರಣರು, ಈ ಶರೀರಕ್ಕೆ 103 ವರ್ಷ 5 ತಿಂಗಳು ವಯಸ್ಸಾಗಿದೆ ಅದು ನನಗಲ್ಲ, ಲಿಂಗಚೈತನ್ಯಕ್ಕೆ ಎಂದು ಹೇಳಿ ಅನುಭಾವ ಪ್ರವಚನ ಮತ್ತು ವಚನಗಳನ್ನು ಹಾಡುವ ಮುಖಾಂತರ ಸುಮಾರು ಒಂದೂವರೆ ಗಂಟೆಗಳ ಕಾಲ ಅನುಭವದ ಮಾತುಗಳನ್ನಾಡಿದರು.
ಮತ್ತಿಹಳ್ಳಿಯಲ್ಲಿ ಸಿದ್ದರಾಮಣ್ಣನವರ ಪೂರ್ವಾಶ್ರಮವಿದ್ದು, ಹಲವಾರು ವರ್ಷಗಳ ಕಾಲ ಬಸವ ಕಲ್ಯಾಣದ ಅನುಭವ ಮಂಟಪದ ಸಂಚಾಲಕರಾಗಿ ದೇಶ-ವಿದೇಶಗಳಲ್ಲಿ ಮತ್ತು ಕರ್ನಾಟಕ ಮತ್ತು ಎಲ್ಲಾ ರಾಜ್ಯಗಳಲ್ಲಿ ಸಂಚರಿಸಿ ಬಸವ ತತ್ವವನ್ನು ಸಾರಿದ್ದಾರೆ. ಈಗ ಅವರು ಸ್ವಗ್ರಾಮ ಮತ್ತಿಹಳ್ಳಿಯಲ್ಲಿ ಭಾರತೀಯ ಬಸವ ದಳ ಶರಣ ಮಂಟಪ ಆಶ್ರಮದಲ್ಲಿ ನೆಲೆಸಿದ್ದಾರೆ.