ಚಿತ್ರದುರ್ಗ, ಮೇ 19- ರೋಗಿ ಮತ್ತು ವೈದ್ಯರ ನಡುವೆ ಸೇತುವೆಯಾಗಿ ಸೇವೆ ಮಾಡುವ ದಾದಿಯರ ಕಾರ್ಯ ಶ್ಲಾಘನೀಯ ಎಂದು ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್.ಜೆ.ಎಂ. ನರ್ಸಿಂಗ್ ಕಾಲೇಜು ವತಿಯಿ ಂದ ಬಿಚ್ಚುಗತ್ತಿ ಭರಮಣ್ಣನಾಯಕ ಸಭಾಂಗಣದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಹಾಗೂ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಿಂಗ್ ಶಿಕ್ಷಣ ಸೇವಾ ಮನೋಭಾವ ಕಲಿಸುತ್ತದೆ ಆದ್ದರಿಂದ ಅಧ್ಯಯನ ಮುಗಿಸಿ ವೃತ್ತಿ ಜಗತ್ತಿಗೆ ಕಾಲಿಟ್ಟಾಗ ಪ್ರಾಮಾಣಿಕ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ನಾಗಲಕ್ಷ್ಮೀ ಮ್ಯಾನೇಜ್ಮೆಂಟ್ ವಿಷಯದಲ್ಲಿ 7ನೇ ರಾಂಕ್, ಸೈಕಾಲಜಿ ವಿಷಯದಲ್ಲಿ ಅಫಿಯಾ ಜೋಶಿ 10ನೇ ರಾಂಕ್ ಮತ್ತು ಸಿಇಟಿ ವಿಷಯದಲ್ಲಿ ಎಸ್. ಸುಮಯಾ ಬಾನು 10ನೇ ರಾಂಕ್ ಗಳಿಸಿದ್ದಾರೆ. ಇವರೆಲ್ಲರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲ ಯದ ಪ್ರಾಧ್ಯಾಪಕ ಡಾ. ನಾರಾಯಣಮೂರ್ತಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಡಾ. ಸವಿತಾ, ಸಹಪ್ರಾಧ್ಯಾಪಕಿ ಕೋಮಲಾ ಇದ್ದರು.