ಬಾಪೂಜಿ ಎಂಬಿಎ ಕಾಲೇಜಿನ ಕಾರ್ಯಕ್ರಮದಲ್ಲಿ ಅಥಣಿ ಎಸ್.ವೀರಣ್ಣ
ದಾವಣಗೆರೆ, ಮೇ 19- ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಿ ಕಲಿಕೆಯಲ್ಲಿ ತೊಡಗಬೇಕು ಎಂದು ಬಾಪೂಜಿ ಬಿ ಸ್ಕೂಲ್ ನ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಹೇಳಿದರು.
ನಗರದ ಬಾಪೂಜಿ ಎಂ.ಬಿ.ಎ ಕಾಲೇ ಜಿನ ಸಭಾಂಗಣದಲ್ಲಿ ಶನಿವಾರ ಆಯೋ ಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪಡೆದ ಮಕ್ಕಳು ಕೇವಲ ಒಂದು ಪದವಿಗೆ ಸೀಮಿತವಾಗದೇ ಇನ್ನೂ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಜ್ಞಾನದ ಮಟ್ಟ ವೃದ್ಧಿಸಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ತನ್ನದೇ ಆದ ಚಾಪು ಮೂಡಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ತಂತ್ರಜ್ಞಾನದ ಲಾಭ ಪಡೆಯುವಂತೆ ಹೇಳಿದರು.
ಭಾರತೀಯ ವಾಯಪಡೆಯ ತಂಡದ ಕ್ಯಾಪ್ಟನ್ ಡಾ. ವಿನಯ್ ವಿಠ್ಠಲ್ ವಿದ್ಯಾರ್ಥಿಗಳಿಗೆ ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ನೌಕಾ ಪಡೆಯ ಬಗ್ಗೆ ಮಾತನಾಡಿದರು.
ಕೆ.ಎಸ್. ಚೈತ್ರಾ ವಾರ್ಷಿಕ ವರದಿ ಮಂಡಿಸಿದರು.ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಎಸ್.ಎಚ್. ಸುಜಿತ್ ಕುಮಾರ್ ಸ್ವಾಗತಿಸಿದರು. ಪರಶುರಾಮ್ ಮತ್ತು ದಿವ್ಯಾ ನಿರೂಪಿಸಿದರು.
ಬಾಪೂಜಿ ಬಿ ಸ್ಕೂಲ್ ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ, ಕಾಲೇಜಿನ ಪ್ರಾಚಾರ್ಯ ಡಾ. ನವೀನ್ ನಾಗರಾಜ್, ಕಾಲೇಜಿನ ಸಿಬ್ಬಂದಿ ಹಾಗೂ ಪಾಲಕರು ಇದ್ದರು.