ಜಗದ್ಗುರು ರೇವಣಸಿದ್ದೇಶ್ವರರ ಇತಿಹಾಸ ಮರೆ ಮಾಚುವ ಹುನ್ನಾರ

ಜಗದ್ಗುರು ರೇವಣಸಿದ್ದೇಶ್ವರರ ಇತಿಹಾಸ ಮರೆ ಮಾಚುವ ಹುನ್ನಾರ

ಕಾಗಿನೆಲೆ ಶ್ರೀಗಳು

ಮಲೇಬೆನ್ನೂರು, ಮೇ 19- ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಬಗ್ಗೆ ಇರುವ ಇತಿಹಾಸವನ್ನು ಮರೆ ಮಾಚುವ ಹುನ್ನಾರ ಪಟ್ಟಭದ್ರರಿಂದ ನಡೆಯುತ್ತಾ ಬಂದಿದ್ದು, ಇದನ್ನು ಸಹಿಸುವುದಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಜಯಂತ್ಯೋತ್ಸವ ಮತ್ತು ಬೆಳ್ಳೂಡಿ ಶಾಖಾಮಠದ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ದಿವ್ಯ ನೇತೃತ್ವ ವಹಿಸಿ ಶ್ರೀಗಳು ಮಾತನಾಡಿದರು.

ಬಹುದೊಡ್ಡ ತಪ್ಪಸ್ಸಿನ ಶಕ್ತಿ ಹೊಂದಿರುವ ಶ್ರೀ ರೇವಣಸಿದ್ದೇಶ್ವರರ ಇತಿಹಾಸ ಕೂಡಾ ಬಹಳ ದೊಡ್ಡದಾಗಿದೆ. ಕುರುಬ ಸಮಾಜದ ಕುಲಗುರು ಗಳಾಗಿರುವ ಶ್ರೀ ರೇವಣಸಿದ್ದೇಶ್ವರರು ಸಿದ್ದರಾಮೇಶ್ವರ, ಮರುಳಸಿದ್ದ ಸೇರಿದಂತೆ ಅನೇಕ ಮಹಾತ್ಮರಿಗೆ ಹರಿಸಿದವರೂ ಆಗಿದ್ದಾರೆ. ಅಂತಹ ಶಕ್ತಿ ಹೊಂದಿರುವ ಪವಾಡ ಪುರುಷನ ರಕ್ತವನ್ನು ಹಂಚಿಕೊಂಡು ಹುಟ್ಟಿರುವ ನಾವು ಧನ್ಯರು ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ಈ ವರ್ಷದಿಂದ ಪ್ರತಿವರ್ಷ ಏಪ್ರಿಲ್ 10 ರಂದು ನಮ್ಮ ಜನ್ಮ ದಿನದಂದು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಯಂತಿ ಮತ್ತು ಬೆಳ್ಳೂಡಿ ಶಾಖಾ ಮಠದ ವಾರ್ಷಿಕೋತ್ಸವ  ಆಚರಿಸುವುದಾಗಿ ಶ್ರೀಗಳು ಘೋಷಿಸಿದರು.

ಮಠದ ಸೂಚನೆಯಂತೆ ನಮ್ಮ ಜನ್ಮ ದಿನಕ್ಕೆ ಹೂವಿನ ಹಾರ, ಕೇಕ್ ಬದಲಿಗೆ ದವಸ ಧಾನ್ಯಗಳನ್ನು ಮಠದ ವಿದ್ಯಾರ್ಥಿ ನಿಲಯಕ್ಕೆ ನೀಡಿರುವ ಭಕ್ತರನ್ನು ಶ್ರೀಗಳು ಇದೇ ವೇಳೆ ಅಭಿನಂದಿಸಿದರು.

ಪಂಚಮಸಾಲಿ ಪೀಠದ ಶ್ರೀ ವಚನಾ ನಂದ ಸ್ವಾಮೀಜಿ ಮಾತನಾಡಿ, ಕಾಗಿನೆಲೆ ಶ್ರೀಗಳಲ್ಲಿ ಗಟ್ಟಿತನ ಮತ್ತು ಸಮಾಜದ ಬಗ್ಗೆ ಅವರಿಗಿರುವ ಕಾಳಜಿ, ಕಳಕಳಿ ನಮಗೆಲ್ಲಾ ಮಾದರಿಯಾಗಿದೆ ಎಂದು ಜನ್ಮ ದಿನದ ಶುಭಾಶಯ ಕೋರಿದರು.

ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, ವಿಶಿಷ್ಟ ಸಂಸ್ಕೃತಿ ಹೊಂದಿರುವ ಹಾಲುಮತ ಸಮಾಜಕ್ಕೆ ನಿರಂಜನಾನಂದ ಪುರಿ ಶ್ರೀಗಳು ಪೀಠಾಧಿತಿಗಳಾದ ನಂತರ, ಸಮಾಜಕ್ಕೆ ಎರಡು ಬಾರಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳು ಸಿಗುವಂತಾಗಿವೆ. ಶ್ರೀಗಳಲ್ಲಿರುವ ಸಂಕಲ್ಪ ಶಕ್ತಿಯಿಂದಾಗಿ ಯಾವುದೇ ಸರ್ಕಾರ ಬರಲಿ, ಹಿಂದುಳಿದ – ದಲಿತ – ಮಠಗಳ ಏಳಿಗೆಗೆ ಹೋರಾಟ ಮಾಡುತ್ತಾರೆ.

ನಾಡಿನ ಬಹುತೇಕ ಮಠಾಧೀಶರೊಂ ದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾಗಿನೆಲೆ ಶ್ರೀಗಳು, ಅಂದುಕೊಂಡಿದ್ದನ್ನು ಆ ಕಾಲಮಿತಿಯೊಳಗೆ ಮಾಡಿ ಮುಗಿಸುತ್ತಾರೆಂ ಬುದಕ್ಕೆ ಬೆಳ್ಳೂಡಿ ಶಾಖಾ ಮಠ, ಮೈಲಾರ ಶಾಖಾಮಠ, ಶಿಕ್ಷಣ ಸಂಸ್ಥೆಗಳು, ಕಟ್ಟಡಗಳ ಜೊತೆಗೆ ಇದೀಗ ಬೆಂಗಳೂರಿನಲ್ಲೂ ಶಾಖಾಮಠ ನಿರ್ಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ನಾಡಿನ ಎಲ್ಲಾ ಹಿಂದುಳಿದ – ದಲಿತ – ಮಠಾಧೀಶರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿರುವ ಕಾಗಿನೆಲೆ ಶ್ರೀಗಳು, ನಮಗೆ ಆದರ್ಶವಾಗಿದ್ದಾರೆ. ಅವರು ಸರ್ವರಲ್ಲೂ ಒಂದಾಗಿ ನಡೆಯುತ್ತಾರೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಕಾಗಿನೆಲೆ ಶ್ರೀಗಳು ತಮ್ಮ ಜನ್ಮದಿನವನ್ನು ಕುಲಗುರುಗಳ ಜಯಂತಿ ಯನ್ನಾಗಿ ಆಚರಿಸುವ ಮೂಲಕ ಮಾದರಿಯಾ ಗಿದ್ದಾರೆ. ಸ್ವಾಭಿಮಾನಿಗಳಾಗಿ ನಾವೆಲ್ಲಾ ಮಠ-ಜಾರಿಗಳನ್ನು ಕಟ್ಟಿದ್ದೇವೆ ಎಂದರೆ ಅದಕ್ಕೆ ಕಾಗಿನೆಲೆ ಶ್ರೀಗಳೇ ಕಾರಣ ಎಂದರು.

ಹೊಸದುರ್ಗ ಶಾಖಾಮಠದ ಶ್ರೀ ಈಶ್ವರನಾನಂದ ಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಶ್ರೀಗಳು ಮಾತನಾಡಿದರು.

ಹಡಪದ ಅಪ್ಪಣ್ಣ ಗುರುಪೀಠದ ಶ್ರೀಗಳು, ಯಲವಟ್ಟಿ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ, ಮೈಲಾರದ ಗೊರವಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಬಿ.ವೈ.ರಾಘವೇಂದ್ರ,  ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಬಸವರಾಜ ಶಿವಣ್ಣನವರ್, ಬಿ.ಪಿ.ಹರೀಶ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ರಾಜನಹಳ್ಳಿ ಶಿವಕುಮಾರ್, ಕೆ.ಜಡಿಯಪ್ಪ, ಎಸ್.ಜಿ.ಪರಮೇಶ್ವರಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಹನಗವಾಡಿ ಕುಮಾರ್, ಕೆ.ಪಿ.ಗಂಗಾಧರ್, ಹೊನ್ನಾಳಿ ಮಹೇಶ್, ಶಾಂತರಾಜ್ ಪಾಟೀಲ್, ಹನಗವಾಡಿ ವೀರೇಶ್, ಗುರುನಾಥ್, ಚಂದ್ರಶೇಖರ್ ಪೂಜಾರ್, ಕೆ.ಪ್ರಸನ್ನಕುಮಾರ್, ಐರಣಿ ಅಣ್ಣಪ್ಪ, ಕೆ.ರೇವಣಸಿದ್ದಪ್ಪ, ಪಿ.ಆರ್.ಕುಮಾರ್, ಪಿ.ಹೆಚ್.ಶಿವು, ಪಿ.ಆರ್.ರಾಜು, ಭೋವಿಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!