ದಾವಣಗೆರೆ, ಮೇ. 16 – ಸಂಗೀತಕ್ಕೆ ಮನಸ್ಸಿನ ಖಿನ್ನತೆ ವಾಸಿ ಮಾಡುವ ಗುಣವಿದೆ ಎಂದು ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಹೇಳಿದರು.
ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ಆರ್.ಎಚ್.ಗೀತಾ ಮಂದಿರದಲ್ಲಿ ನಡೆದ ಗೀತ ಗಾಯನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಶೋಭಾ ರಂಗನಾಥ್ ಮಾತನಾಡಿ, ಮಕ್ಕಳು ಪಠ್ಯ ಹಾಗೂ ಅಂಕಗಳಿಗೆ ಸೀಮಿತವಾಗದೇ ಸಂಗೀತ ಕಲಿಕೆ ಶಿಕ್ಷಣಕ್ಕೂ ಮಹತ್ವ ನೀಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ, ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ, ತಾಲ್ಲೂಕು ಘಟಕದ ಅಧ್ಯಕ್ಷೆ ಮಾಧುರಿ ಶೇಷಗಿರಿ, ಆಕಾಶವಾಣಿ ಕಲಾವಿದ ಅಜಯ್ ನಾರಾಯಣ್, ಹಾಲಸ್ವಾಮಿ, ಜೆ. ಶಿಲ್ಪ ಇದ್ದರು.