ದಾವಣಗೆರೆ, ಏ. 19 – ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 101ನೇ ರ್ಯಾಂಕ್ ಪಡೆದು, ಕರ್ನಾಟಕಕ್ಕೆ 2ನೇ ರಾಂಕ್ ಪಡೆದಿರುವ ನಗರದ ಸೌಭಾಗ್ಯ ಬೀಳಗಿಮಠ ಅವರ ನಿವಾಸಕ್ಕೆ ಎಸ್.ಎಸ್. ಕೇರ್ ಟ್ರಸ್ಟ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತೆರಳಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸೌಭಾಗ್ಯ ತಂದೆ ಶರಣಯ್ಯ ಸ್ವಾಮಿ ಮತ್ತು ತಾಯಿ ಶರಣಮ್ಮ ದಂಪತಿಯನ್ನು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸನ್ಮಾನಿಸಿ, ಗೌರವಿಸಿದರು.
January 3, 2025