ಕೊಟ್ಟೂರು, ಏ. 11 – ಕೊಟ್ಟೂರಿನ ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ. ವಿ 600/596 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಕಾಲೇಜಿನ ಕಲಾ ವಿಭಾಗದಲ್ಲಿ ಸತತವಾಗಿ 8 ವರ್ಷಗಳಿಂದ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷವೂ ಕಲಾ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದು ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ನಾಗಾಲೋಟದ ಅಭಿಯಾನವನ್ನು ನಡೆಸುತ್ತಿದೆ.
ಇದೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅಮೃತ ಹೆಚ್ 600/587 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಹತ್ತನೇ ರಾಂಕ್ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಡಿನಿಯಾ 600/586 ಅಂಕಗಳನ್ನು ಪಡೆಯುವ ಮೂಲಕ ಇಂದಿರಾ ಎಜುಕೇಶನ್ ಟ್ರಸ್ಟ್ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲರಾದ ವೀರಭದ್ರಪ್ಪ ಹೆಚ್.ಎನ್. ತಿಳಿಸಿದರು.
ಉಪನ್ಯಾಸಕರಾದ ತಿಪ್ಪೇಸ್ವಾಮಿ, ನಾಗರಾಜ್, ಮಂಜುನಾಥ್, ವೀರೇಶ್, ಕೊಟ್ರೇಶ್, ಲಕ್ಷ್ಮಿ, ಸುನಿತಾ, ಮಲ್ಲಿಕಾರ್ಜುನ, ಎಚ್ ಪವನ್ ಕುಮಾರ್ ಹಾಗೂ ಉಪನ್ಯಾಸಕರ ಅಭಿನಂದಿಸಿದರು.