ಹೂವಿನಹಡಗಲಿ, ಏ.3- ತಾಲ್ಲೂಕಿನ ಸುಕ್ಷೇತ್ರ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಆನ್ಲೈನ್ ಸೇವಾ ರಶೀದಿಗಳಿಗೆ ನಿನ್ನೆ ಚಾಲನೆ ನೀಡಲಾಯಿತು. ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ಇತರೆ ಸೇವೆಗಳ ಸೇವಾ ರಶೀದಿಗಳಿಗೆ ಗಣಕೀಕೃತ ಚಾಲನೆ ನೀಡಿದೆ. ಈ ವೇಳೆ ದೇವಸ್ಥಾನದ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಯನಿರ್ವಾಹಕ ಪಿ. ಶಾಂತ, ಸಚಿನ್ ಭಟ್, ಟಿ.ಕೆ. ರಮೇಶ್, ಚಂದ್ರಶೇಖರ್, ನೀಲಮ್ಮ, ರವಿ ಮತ್ತು ಸಿಬ್ಬಂದಿ ಇದ್ದರು.
ಮೈಲಾರ : ಆನ್ಲೈನ್ ರಶೀದಿಗೆ ಚಾಲನೆ
