ದಾವಣಗೆರೆ, ಏ. 1- ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪ್ ಬ್ಯಾಂಕ್ 2023-24 ನೇ ಸಾಲಿನ ಹಣಕಾಸು ವರ್ಷದ ಅಂತ್ಯಕ್ಕೆ 5 ಕೋಟಿ 78 ಲಕ್ಷ ವ್ಯವಹಾರ ಲಾಭ, 1 ಕೋಟಿ 7 ಲಕ್ಷ ಆದಾಯ ತೆರಿಗೆಯನ್ನು , 55 ಲಕ್ಷ 73 ಸಾವಿರ ಶಾಸನಬದ್ಧ ಪ್ರವದಾನಗಳನ್ನು ಮಾಡಿದ ನಂತರ ಮಾ. 31 ಕ್ಕೆ ನಿವ್ವಳ ಲಾಭ 4 ಕೋಟಿ, 18 ಲಕ್ಷ ಆಗಿರುತ್ತದೆ.
ಹಣಕಾಸು ವರ್ಷ 2023-24 ನೇ ಸಾಲಿನ ಅಂತ್ಯಕ್ಕೆ ಒಟ್ಟು ಸಾಲ ಮುಂಗಡಗಳು 104 ಕೋಟಿ, 64 ಲಕ್ಷಗಳಿದ್ದು, ಇದಕ್ಕೆ ಪ್ರತಿಯಾಗಿ ರಿಸರ್ವ ಫಾರ್ ಬ್ಯಾಡ್ ಅಂಡ್ ಡೌಟ್ಪುಲ್ ಡೆಟ್ಸ್ ಖಾತೆಯಲ್ಲಿ 4 ಕೋಟಿ 27ಲಕ್ಷ ಗಳಿಂದ ನಿವ್ವಳ ಎನ್ಪಿಎ ಶೇ. ಪ್ರಮಾಣವು ಶೂನ್ಯವಾಗಿರುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ ಸಂತಸ ವ್ಯಕ್ತಪಡಿಸಿದರು.
ನೂತನ ವರ್ಷ ಕ್ರೋಧಿನಾಮ ಸಂವತ್ಸರ ವೈಶಾಖ ಮಾಸ ಮೇ 18 ರಂದು ಎಲ್ಲಾ ಆರ್ಯವೈಶ್ಯ ಬಾಂಧವರು ವಿಜೃಂಭಣೆಯಿಂದ ಆಚರಿಸುವ ವಾಸವಿ ಜಯಂತಿಯ ಸವಿನೆನಪಿಗಾಗಿ ನಾಳೆ ದಿನಾಂಕ 2 ರಿಂದ ಮೇ 31 ರವರೆಗೆ ವಿಶೇಷ ಠೇವಣಿ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆ ಅಡಿಯಲ್ಲಿ ಶೇ. 9 ರ ಬಡ್ಡಿ ದರದಲ್ಲಿ `ವಾಸವಿ 555′ ಮತ್ತು ಶೇ. 8.75 ರ ಬಡ್ಡಿ ದರದಲ್ಲಿ `ವಾಸವಿ 450′ ಅವಧಿ ಠೇವಣಿಗಳನ್ನು ನಿಬಂಧನೆಗೆ ಒಳಪಟ್ಟು ಸಾರ್ವಜನಿಕರಿಂದ, ಠೇವಣಿದಾರರಿಂದ ಮತ್ತು ಗ್ರಾಹಕರಿಂದ ಸ್ವೀಕರಿಸಲು ಬ್ಯಾಂಕು ಉದ್ದೇಶಿಸಿದೆ ಎಂದರು.
ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳುವ ಮೂಲಕ ಪಾನ್ ಕಾರ್ಡ್, ಆಧಾರ್ ಕಾರ್ಡ್ ಆದಾಯ ತೆರಿಗೆ ಅಂತರ್ಜಾಲದಲ್ಲಿ ಜೋಡಣೆ ಮಾಡಿಕೊಂಡ ಠೇವಣಿದಾರರು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಠೇವಣಿದಾರರು ಆದಾಯ ತೆರಿಗೆ ನಿಯಮಾಮಾನುಸಾರ ನಮೂನೆ 15 ಜಿ.ಹೆಚ್. ಅನ್ನು ಬ್ಯಾಂಕಿಗೆ ಸಲ್ಲಿಸಲು ಅಧ್ಯಕ್ಷರು ಕೋರಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಕಾಸಲ್ ವಿ.ಮಂಜುನಾಥ್, ನಿರ್ದೇಶಕರಾದ ಆರ್.ಎಲ್. ಪ್ರಭಾಕರ್, ಕಾಸಲ್ ಎಸ್. ಸತೀಶ, ಎನ್. ಕಾಶೀನಾಥ್, ಕೆ.ಎನ್. ಅನಂತರಾಮ ಶೆಟ್ಟಿ, ಎ.ಎಸ್. ಸತ್ಯನಾರಾಯಣ ಸ್ವಾಮಿ, ಜೆ. ರವೀಂದ್ರ ಗುಪ್ತ, ಬಿ.ಎಸ್. ಶಿವಾನಂದ್, ವೈ.ಬಿ. ಸತೀಶ, ಬಿ.ಪಿ. ನಾಗಭೂಷಣ್, ಗೀತಾ ಬದ್ರಿನಾಥ್, ಸುಧಾ ನಾಗರಾಜ್, ವೃತ್ತಿಪರ ನಿರ್ದೇಶಕರಾದ ಜಿ. ಶ್ರೀಧರ್, ಬಿ. ಹನುಮಂತ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಪಡಗಲ್ ಪ್ರಶಾಂತ್, ಶಾಕಾ ಮುಖ್ಯಸ್ಥರಾದ ಎಸ್.ಆರ್. ವಿಜಯಕುಮಾರ್, ಎನ್. ಪ್ರಸಾದ್, ಸಂದೇಶ್ ಟೀಕಾ, ನಾಗಜ್ಯೋತಿ ಮತ್ತಿತರರಿದ್ದರು.