ಮಹಿಳೆಯರು ಮುಖ್ಯ ವಾಹಿನಿಗೆ ಬರಲಿ

ಮಹಿಳೆಯರು ಮುಖ್ಯ ವಾಹಿನಿಗೆ ಬರಲಿ

ಕೊಟ್ಟೂರು, ಫೆ. 12 – ಯೋಜನಾ ವ್ಯಾಪ್ತಿಯಲ್ಲಿ 25 ಮಹಿಳಾ ಜ್ಞಾನ-ವಿಕಾಸ ಕೇಂದ್ರಗಳ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ನಡೆಯಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಕೊಟ್ಟೂರು ಆರಕ್ಷಕ ಸರ್ಕಲ್ ಇನ್‌ಸ್ಪೆಕ್ಟರ್ ಟಿ. ವೆಂಕಟಸ್ವಾಮಿ ಅವರು ನೆರವೇರಿಸಿ, ಯಾವುದೇ ಸರ್ಕಾರ ಮಾಡ ದಿರುವ ಕೆಲಸವನ್ನು ಇಂದು ಧರ್ಮಸ್ಥಳ ಯೋಜನೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಈ ಕಾರ್ಯಗಳಲ್ಲಿ ಭಾಗಿಯಾಗುವುದು ಪುಣ್ಯವೇ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವ ನಗರ ದುರ್ಗಾಂಬಿಕ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಎಚ್.ಕೆ. ಡಿಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾ ಟಕ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಬಿ. ಗಣೇಶ್ ಭಾಗವಹಿಸಿ ದ್ದರು. ಇವರು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಜೊತೆಗೆ  ಕುಟುಂಬವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಅಲ್ಲದೆ ಉಳಿತಾಯ, ಶಿಕ್ಷಣ, ಆರ್ಥಿಕ ನಿರ್ವಹಣೆ ಮತ್ತು ಸ್ವಚ್ಛತೆ, ಶಿಸ್ತು, ಕೌಟುಂಬಿಕ ಜೀವನದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಜ್ಞಾನವನ್ನು ನೀಡುವ ಕಾರ್ಯಕ್ರಮವೇ ಜ್ಞಾನ ವಿಕಾಸ ಕಾರ್ಯಕ್ರಮ ಎಂದು ಹೇಳಿದರು. 

ತಹಶೀಲ್ದಾರ್ ಜಿ.ಕೆ. ಅಮರೇಶ್  ಅವರು ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. 

ಮುಖ್ಯ ಅತಿಥಿಗಳಾಗಿ ವಿಜಯನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಜನಜಾಗೃತಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಚ್ ವಿಶ್ವೇಶ್ವರ ಸಜ್ಜನ್  ಹಾಗೂ ಶ್ರೀಮತಿ ಡಾ. ಕುಸುಮ ಸಜ್ಜನ್ ಅವರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಎಚ್. ವಿಶ್ವೇಶ್ವರ ಸಜ್ಜನ್ ಅವರು ನಿತ್ಯ ಆಹಾರದಲ್ಲಿ ಸಿರಿ ಧಾನ್ಯ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಡಾ. ಕುಸುಮಾ ಸಜ್ಜನ್ ಅವರು ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾಗಿದ್ದು ತಮ್ಮ ಪಾತ್ರಕ್ಕೆಕನುಗುಣವಾಗಿ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಾಳೆ ಎಂದು ಹೇಳಿದರು.

error: Content is protected !!