ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಿಎಂಗೆ ಮನವಿ

ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಿಎಂಗೆ ಮನವಿ

ಹರಿಹರ, ಫೆ.5- ತಾಲ್ಲೂಕಿನ ಕಡ್ಲೆಗೊಂದಿ, ಭಾನುವಳ್ಳಿ ಗ್ರಾಮಗಳ ದಲಿತ, ಹಿಂದುಳಿದ ನಿರ್ವಸತಿಗರಿಗೆ ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಾವಣಗೆರೆಗೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.

 ಭಾನುವಳ್ಳಿ ಹಾಗೂ ಕಡ್ಲೆಗೊಂದಿ ಗ್ರಾಮದಲ್ಲಿ ಸುಮಾರು ಕುಟುಂಬಗಳು ಮಳೆ, ಗಾಳಿ, ಬಿಸಿಲು, ಚಳಿಯಿಂದ ರಕ್ಷಣೆಯಿಲ್ಲದೆ ಗುಡಿಸಲು, ನೆರಿಕೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಎರಡು ಗ್ರಾಮಗಳಲ್ಲೂ ಸರ್ಕಾರಿ ಜಾಗ ಇದ್ದು, ಸದರಿ ಸ್ಥಳದಲ್ಲಿ  ಕೂಡಲೇ ನಿರ್ವಸತಿಗರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಯಿತು. 

ಮನವಿ ಸ್ವೀಕರಿಸಿದ ಸಿಎಂ ರವರು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸುವುದಾಗಿ ಭರವಸೆ ನೀಡಿದರು ಎಂದು ಕದಸಂಸ ತಾಲ್ಲೂಕು ಸಂಚಾಲಕ ಪಿ. ಜೆ. ಮಹಾಂತೇಶ್ ಹೇಳಿದರು.

ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಪದಾಧಿಕಾರಿಗಳಾದ ಅಣಜಿ ಹನುಮಂತ, ಎಲೆಕ್ಟ್ರಿಕಲ್ ಮಂಜುನಾಥ, ದೊಡ್ಡಪ್ಪ ಆವರಗೊಳ್ಳ, ಸಿ. ಚೌಡಪ್ಪ, ಕಡ್ಲೆಗೊಂದಿ ತಿಮ್ಮಣ್ಣ, ಲಕ್ಷ್ಮಣ, ಬೇತೂರು ಹನುಮಂತ, ಹಾಲುವರ್ತಿ ಮಹಾಂತೇಶ್, ಶಿವಶಂಕರ್ ಇತರರಿದ್ದರು.

error: Content is protected !!