ದಾವಣಗೆರೆ, ಜ. 9 – ನಗರದ ಕೆ.ಆರ್. ರಸ್ತೆಯಲ್ಲಿರುವ ಮುದೇಗೌಡ್ರು ಮಲ್ಲಮ್ಮ ಮರಿಯಪ್ಪ ಬಾಲಿಕಾ ಪ್ರೌಢಶಾಲಾ ಆವರಣದಲ್ಲಿರುವ ಭಕ್ತ ಮಾರ್ಕಂಡೇಯ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ ಹಾಗೂ ಪುಷ್ಪಾಲಂಕಾರಗಳೊಂದಿಗೆ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಕಾರ್ತಿಕೋತ್ಸವದ ದೀಪ ಬೆಳಗಿಸುವುದರ ಮೂಲಕ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಿವ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಯುವ ಮುಖಂಡ ಆನೆಕೊಂಡದ ಕೆ.ಸಿ. ಲಿಂಗರಾಜು, ಚಂದ್ರಪ್ಪ, ಎಂ.ಎಂ.ಎಂ. ಬಾಲಿಕಾ ಪ್ರೌಢಶಾಲೆಯ ಮುತ್ತೋಪಾಧ್ಯಾಯ ವಿರೂಪಾಕ್ಷಪ್ಪ, ಶಾಲೆಯ ನೌಕರರು, ದೇವಸ್ಥಾನದ ಸಮಿತಿಯವರು, ಆ ಭಾಗದ ಭಕ್ತ ಸಮೂಹ ಪಾಲ್ಗೊಂಡು ಕಾರ್ತಿಕೋತ್ಸವದ ದೀಪ ಬೆಳಗಿಸಿ ತಮ್ಮ ಶ್ರದ್ಧಾ ಭಕ್ತಿ ಸಮರ್ಪಣೆಯನ್ನು ಅರ್ಪಿಸಿತು. ಭಕ್ತಾದಿಗಳಿಗೆ ಶ್ರೀ ಸ್ವಾಮಿಯ ಪಳಾರ ಹಾಗೂ ಪ್ರಸಾದವನ್ನು ವಿತರಿಸಲಾಯಿತು.